ADVERTISEMENT
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Gali Janardhan Reddy) ವಿರುದ್ಧದ ಅಕ್ರಮ ಗಣಿಗಾರಿಕೆ (Illegal Mining) ಪ್ರಕರಣದ ವಿಚಾರಣೆ 12 ವರ್ಷ ವಿಳಂಬ ಆಗಿರುವ ಬಗ್ಗೆ ಸರ್ವೋಚ್ಛ ನ್ಯಾಯಾಲಯ (Supreme Court) ಕೆಂಡಾಮಂಡಲವಾಗಿದ್ದು, ವಿಚಾರಣೆ ವಿಳಂಬ ಆಗಿದ್ದು ಯಾಕೆ ಎಂಬ ಬಗ್ಗೆ ವಿವರಣೆ ನೀಡುವಂತೆ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯದ (Trial Court) ನ್ಯಾಯಾಧೀಶರಿಗೆ ಸೂಚಿಸಿದೆ.
ಗಂಭೀರ ಅಪರಾಧದ ಆರೋಪದ ವಿಚಾರಣೆಯನ್ನು ಮುಂದುವರಿಸದೇ ಇರುವುದನ್ನು ಅನುಮತಿಸಲು ಸಾಧ್ಯವಿಲ್ಲ ಮತ್ತು ಇದು ನ್ಯಾಯದಾನದ ಉಲ್ಲಂಘನೆ ಅಲ್ಲದೇ ಬೇರೇನೂ ಅಲ್ಲ.
12 ವರ್ಷ ಕಳೆದರೂ ಹೈದ್ರಾಬಾದ್ನ ಸಿಬಿಐ ಪ್ರಕರಣಗಳಿಗಾಗಿರುವ ಪ್ರಧಾನ ವಿಶೇಷ ನ್ಯಾಯಾಧೀಶರ ಮುಂದೆ ಪ್ರಕರಣ ಬಾಕಿ ಇರುವುದು ದುರಾದೃಷ್ಟಕರ
ಎಂದು ನ್ಯಾಯಮೂರ್ತಿ ಎಂ ಆರ್ ಶಾಹಾ ಮತ್ತು ನ್ಯಾಯಮೂರ್ತಿ ಕೃಷ್ಣ ಮುರಾರಿ ಅವರಿದ್ದ ಪೀಠ ಕೆಂಡಾಮಂಡಲವಾಗಿದೆ.
2009ರಲ್ಲಿ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಸಿಬಿಐ (CBI) ಅಕ್ರಮ ಗಣಿಗಾರಿಕೆ ಪ್ರಕರಣ ದಾಖಲಿಸಿಕೊಂಡಿತ್ತು.
ಪ್ರಕರಣದ ವಿಚಾರಣೆಯ ಹಂತ ಮತ್ತು ವಿಚಾರಣೆ ಯಾಕೆ ಮುಂದುವರಿದಿಲ್ಲ ಎಂಬ ಬಗ್ಗೆ ಕಾರಣಗಳನ್ನು ಕೇಳಿ ಮುಚ್ಚಿದ ಲಕೋಟೆಯಲ್ಲಿ ವರದಿ ಪಡೆಯುವಂತೆ ಸರ್ವೋಚ್ಛ ನ್ಯಾಯಾಲಯ ತನ್ನ ರಿಜಿಸ್ಟ್ರಿಗೆ ಸೂಚಿಸಿದೆ.
ADVERTISEMENT
2015ರಲ್ಲಿ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು (Bail) ಮಾಡಿತ್ತು. ಆದರೆ ಕರ್ನಾಟಕದ ಬಳ್ಳಾರಿ (Bellary) ಮತ್ತು ಆಂಧ್ರಪ್ರದೇಶದ (Andrapradesh) ಕಡಪ (Cudappah) ಮತ್ತು ಅನಂತಪುರಂ (Ananthpuram) ಜಿಲ್ಲೆಗಳಿಗೆ ಹೋಗದಂತೆ ನಿರ್ಬಂಧ ಹೇರಿತ್ತು. ಆದರೆ ಈ ನಿರ್ಬಂಧವನ್ನು ಆಗಸ್ಟ್ 19, 2021ರಂದು ತೆರವುಗೊಳಿಸಿದ್ದ ಸುಪ್ರೀಂಕೋರ್ಟ್, ಬಳ್ಳಾರಿಗೆ ಹೋಗಲು ರೆಡ್ಡಿಗೆ ಅನುಮತಿ ನೀಡಿತ್ತು. ಆ ಆದೇಶದಲ್ಲೇ ಅಕ್ರಮ ಗಣಿಗಾರಿಕೆಯ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸುವಂತೆ ಸಿಬಿಐ ನ್ಯಾಯಾಲಯಕ್ಕೆ ಸುಪ್ರೀಂಕೋರ್ಟ್ ಸೂಚಿಸಿತ್ತು.
ರೆಡ್ಡಿ ಸಾಕ್ಷಿಗೆ ಬೆದರಿಕೆ ಹಾಕಿದ ಆರೋಪ:
ಬಳ್ಳಾರಿ ಮತ್ತು ಆಂಧ್ರದ ಜಿಲ್ಲೆಗಳಿಗೆ ಹೋಗಲು ರೆಡ್ಡಿಗೆ ನೀಡಿರುವ ಅನುಮತಿಯನ್ನು ರದ್ದುಗೊಳಿಸುವಂತೆ ಸಿಬಿಐ ಸಲ್ಲಿಸಿದ್ದ ಮೇಲ್ಮನಜಿ ಅರ್ಜಿ ಬುಧವಾರ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಗೆ ಬಂತು.
ಈ ವೇಳೆ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ವಿಳಂಬ ಆಗುತ್ತಿರುವ ಬಗ್ಗೆ ಸಿಬಿಐ ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿತು. ಜೊತೆಗೆ ಅಕ್ರಮ ಗಣಿಗಾರಿಕೆ ಪ್ರಕರಣದ ಸಾಕ್ಷಿಯೊಬ್ಬರಿಗೆ ಬೆದರಿಕೆ ಹಾಕಿದ್ದರ ಸಂಬಂಧ ಸೆಪ್ಟೆಂಬರ್ 2ರಂದು ನೀಡಲಾಗಿದ್ದ ದೂರಿನ ಬಗ್ಗೆಯೂ ಸಿಬಿಐ ಸುಪ್ರೀಂಕೋರ್ಟ್ನಲ್ಲಿ ಉಲ್ಲೇಖ ಮಾಡಿದೆ.
ಪ್ರಕರಣದಲ್ಲಿ ಆರೋಪಿಗಳಾಗಿರುವವರು ಕಾಲ ಕಾಲಕ್ಕೆ ಅರ್ಜಿಗಳನ್ನು ಹಾಕುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ಅಸಹಜ ರೀತಿಯಲ್ಲಿ ವಿಳಂಬವಾಗಿದೆ.
ಒಂದು ವೇಳೆ ಆರೋಪಿ (ಗಾಲಿ ಜನಾರ್ದನ ರೆಡ್ಡಿ)ಗೆ ಜಾಮೀನು ಷರತ್ತುಗಳನ್ನು ಸಡಿಲಿಸಿ ಬಳ್ಳಾರಿಯಲ್ಲಿ ವಾಸ್ತವ್ಯಕ್ಕೆ ಅನುಮತಿ ಕೊಟ್ಟರೇ ಪ್ರಕರಣದ ಸಾಕ್ಷಿಗಳ ಮೇಲೆ ಆ ಆರೋಪಿ ಒತ್ತಡವನ್ನು ಹೇರಿ ಅವರಲ್ಲಿ ಅಭದ್ರತೆಯ ಭಾವನೆಯನ್ನು ಸೃಷ್ಟಿಸಬಹುದು
ಎಂದು ಸಿಬಿಐ ತನ್ನ ಪ್ರಮಾಣಪತ್ರದಲ್ಲಿ ವಾದಿಸಿದೆ.
ಗಾಲಿ ಜನಾರ್ದನ ರೆಡ್ಡಿ ಹಲವು ಬಾರಿ ಬಳ್ಳಾರಿಗೆ ಭೇಟಿ ನೀಡಿದ್ದಾರೆ, ಆದರೆ ಸಾಕ್ಷಿಗಳನ್ನು ಬೆದರಿಸಿದ ಅಥವಾ ಅವರ ಮೇಲೆ ಒತ್ತಡ ಹೇರಿದ್ದರ ಬಗ್ಗೆ ಪೊಲೀಸರು ಯಾವುದೇ ವರದಿ ಮಾಡಿಲ್ಲ
ಎಂದು ರೆಡ್ಡಿ ಪರ ವಕೀಲ ರಂಜಿತ್ ಕುಮಾರ್ ವಾದಿಸಿದರು.
ಅದಕ್ಕೆ ಕಾರಣ ಬಳ್ಳಾರಿ ನಿಮ್ಮ ತವರೂರು. ಪೊಲೀಸರು ನಿಮ್ಮ ವಿರುದ್ಧ ವರದಿ ಮಾಡಲ್ಲ. ಈ ಪ್ರಕರಣದಲ್ಲಿ ಸಿಬಿಐ ದೂರುದಾರ