BREAKING: ಮಾನನಷ್ಟ ಪ್ರಕರಣ: ದೇವೇಗೌಡರಿಗೆ ಸುಪ್ರೀಂಕೋರ್ಟ್​​ ರಿಲೀಫ್​

EX PM H D Devegowda
EX PM H D Devegowda
ನೈಸ್​ (ನಂದಿ ಇನ್ಫಾಸ್ಟ್ರಕ್ಚರ್​ ಕಾರಿಡಾರ್​​ ಎಂಟರ್​ಪ್ರೈಸಸ್​ NICE) ವಿರುದ್ಧ ನೀಡಿದ್ದ ಮಾನಹಾನಿಕರ ಹೇಳಿಕೆ ಪ್ರಕರಣ (Defamation Case)ದಲ್ಲಿ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ (Ex PM H D Devegowda) ಅವರಿಗೆ ಸುಪ್ರೀಕೋರ್ಟ್ (Supreme Court Relief)​​ ವಿನಾಯಿತಿ ನೀಡಿದೆ.
ಆದರೆ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು (Public Figures) ಕಂಪನಿಗಳ ಘನತೆ-ಗೌರಕ್ಕೆ ಧಕ್ಕೆ ತರುವ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವುದರಿಂದ ದೂರ ಇರಬೇಕು ಎಂದು ಸುಪ್ರೀಂಕೋರ್ಟ್​ ಅಭಿಪ್ರಾಯಪಟ್ಟಿದೆ.
ಮಾನಹಾನಿ ಭಾಗವಾಗಿ 2 ಕೋಟಿ ರೂಪಾಯಿ ಠೇವಣಿ (ನಷ್ಟ ಪರಿಹಾರ) ಜಮೆ ಮಾಡುವಂತೆ ಬೆಂಗಳೂರಿನ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್​​ ತಡೆಯಾಜ್ಞೆ ನೀಡಿತ್ತು. ಆ ತಡೆಯಾಜ್ಞೆ ತೆರವು ಕೋರಿ ನೈಸ್​ ಕಂಪನಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್​ ಮಾನ್ಯ ಮಾಡಿಲ್ಲ. ಹೈಕೋರ್ಟ್​ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.
10 ವರ್ಷಗಳ ಹಿಂದೆ ಟಿವಿ ಸಂದರ್ಶನದಲ್ಲಿ ದೇವೇಗೌಡರು ನೀಡಿದ್ದ ಹೇಳಿಕೆ ಮಾನಹಾನಿಕರವಾಗಿದೆ ಎಂದು ಹೇಳಿ ನೈಸ್​ ಕಂಪನಿ ಬೆಂಗಳೂರಿನ ನ್ಯಾಯಾಲಯದಲ್ಲಿ (Bengaluru Court) ಮಾನನಷ್ಟ ಮೊಕದ್ದಮೆ ಹೂಡಿತ್ತು. 2021ರಲ್ಲಿ ನ್ಯಾಯಾಲಯವೂ ದೇವೇಗೌಡರಿಗೆ ಮಾನನಷ್ಟದ ಭಾಗವಾಗಿ 2 ಕೋಟಿ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಸೂಚಿಸಿತ್ತು.
ಆದರೆ ಫೆಬ್ರವರಿ 21,2022ರಲ್ಲಿ ಬೆಂಗಳೂರು ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್​ (Karnataka High Court) ತಡೆಯಾಜ್ಞೆ ನೀಡಿತ್ತು ಮತ್ತು ನೈಸ್​ ಕಂಪನಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡದಂತೆ ಹೈಕೋರ್ಟ್​ ದೇವೇಗೌಡರಿಗೆ ಸೂಚಿಸಿತ್ತು.
ಪ್ರಭಾವಿ ಹುದ್ದೆಯಲ್ಲಿರುವ ವ್ಯಕ್ತಿಗಳು ನೀಡುವ ಹೇಳಿಕೆಗಳಿಗೆ ಕಾರ್ಪೋರೇಟ್​ ಕಂಪನಿಗಳ ಹೂಡಿಕೆ, ಗೌರವ ಮತ್ತು ಷೇರುಗಳ ಮೇಲೆ ಪರಿಣಾಮ ಬೀರುತ್ತದೆ.
ನೀವು ಉತ್ತಮ ಯೋಜನೆ ಜಾರಿಗೊಳಿಸಿದ್ದೀರಿ. ಮೌಲ್ಯಯುತವಾದ ಹೂಡಿಕೆ ಮಾಡಿದ್ದೀರಿ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ಬೇಜವಾಬ್ದಾರಿ ಹೇಳಿಕೆ ನೀಡಿದಾಗ ಅದು ಕಂಪನಿಯ ಘನತೆ-ಗೌರವಕ್ಕೆ ಧಕ್ಕೆ ಉಂಟು ಮಾಡುತ್ತದೆ ಮತ್ತು ಷೇರು ಮೌಲ್ಯದ ಮೇಲೆ ಪರಿಣಾಮ ಬೀರುತ್ತದೆ
ಎಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್​ ಮತ್ತು ಹಿಮಾ ಕೊಹ್ಲಿ ಅವರಿದ್ದ ಸುಪ್ರೀಂಕೋರ್ಟ್​​ ಪೀಠ ನೈಸ್​ ಪರ ವಕೀಲರಿಗೆ ಹೇಳಿತು.
1995ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ನೈಸ್​ ಯೋಜನೆಗೆ ಅನುಮೋದನೆ ನೀಡಿದ್ದರು. ಈ ಯೋಜನೆಯನ್ನು ಹೈಕೋರ್ಟ್​ ಮತ್ತು ಸುಪ್ರೀಂಕೋರ್ಟ್​ ಎತ್ತಿಹಿಡಿದಿತ್ತು.

LEAVE A REPLY

Please enter your comment!
Please enter your name here