ಪಕ್ಷದ ವಿಪ್​ ಉಲ್ಲಂಘಿಸುವ ಶಾಸಕರು ಅನರ್ಹತೆಗೆ ಅರ್ಹ – ಸುಪ್ರೀಂಕೋರ್ಟ್​ ಮಹತ್ವದ ಅಭಿಪ್ರಾಯ

Supreme Court

ವಿಧಾನಸಭೆಯಲ್ಲಿ ಪಕ್ಷದ ವಿಪ್​ ಉಲ್ಲಂಘಿಸುವ ಶಾಸಕರು ಅನರ್ಹತೆಗೆ ಒಳಗಾಗಲಿದ್ದಾರೆ ಎಂದು ಸುಪ್ರೀಂಕೋರ್ಟ್​ ಅಭಿಪ್ರಾಯಪಟ್ಟಿದೆ.

ಮಹಾರಾಷ್ಟ್ರದಲ್ಲಿ ಮಹಾಮೈತ್ರಿಕೂಟ ಸರ್ಕಾರದ ಪತನಕ್ಕೆ ಕಾರಣವಾದ ರಾಜಕೀಯ ಬೆಳವಣಿಗೆ ಸಂಬಂಧ ಸುಪ್ರೀಂಕೋರ್ಟ್​ನ ಐವರು ನ್ಯಾಯಮೂರ್ತಿಗಳ ಸಂವಿಧಾನಿಕ ಪೀಠ ದಿನನಿತ್ಯ ವಿಚಾರಣೆ ನಡೆಸುತ್ತಿದೆ.

ಸದನದಲ್ಲಿ ಸದಸ್ಯರು ಪಕ್ಷ ನೀಡುವ ವಿಪ್​ಗೆ ಬದ್ಧರಾಗಿರಬೇಕು ಮತ್ತು ಒಂದು ವೇಳೆ ಮೈತ್ರಿ ಸರ್ಕಾರದ ಭಾಗವಾಗಿರುವ ಆ ಪಕ್ಷದ ಯಾವುದೇ ಒಂದು ಬಣ ನಾವು ಮೈತ್ರಿ ಸರ್ಕಾರದ ಜೊತೆಗೆ ಹೋಗಲ್ಲ ಎಂದರೆ ಆ ಬಣ ಅನರ್ಹತೆಗೆ ಒಳಗಾಗಗಲಿದೆ.

ಒಂದು ಬಾರಿ ಸರ್ಕಾರ ರಚನೆಯಾದ್ರೆ ಆ ಪಕ್ಷದ ಶಾಸಕರು ನಾವು ಮೈತ್ರಿ ಜೊತೆಗೆ ಹೋಗಲ್ಲ ಎನ್ನಲು ಅವಕಾಶವಿಲ್ಲ. ಅವರು ಅನರ್ಹತೆಯ ನಿಯಮಗಳಿಗೆ ಒಳಗಾಗುತ್ತಾರೆ. ಶಾಸಕರು ಪಕ್ಷ ನೀಡುವ ವಿಪ್​​ಗೆ ಬದ್ಧರಾಗಿರಬೇಕು. ವಿಲೀನ ಆಗದ ಹೊರತು ಸದನದ ಸದಸ್ಯರಾಗಿರುವವರೆಗೆ ಪಕ್ಷ ನೀಡುವ ವಿಪ್​ಗೆ ಬದ್ಧರಾಗಿರಲೇಬೇಕು

ಎಂದು ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ಡಿ ವೈ ಚಂದ್ರಚೂಡ್​ ಅವರ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ನಮಗೆ ಈ ಮೈತ್ರಿಕೂಟ ಇಷ್ಟವಿಲ್ಲ ಎಂದು ಹೇಳಿ ಆ ಶಾಸಕರು ರಾಜ್ಯಪಾಲರ ಬಳಿ ಹೋಗಲು ಸಾಧ್ಯವಿಲ್ಲ. ಉತ್ತರ ಸರಳ. ನಿಮಗೆ ಮೈತ್ರಿ ಇಷ್ಟವಿಲ್ಲವೇ..? ಹಾಗಾದ್ರೆ ನಿಮಗೆ ನಾಯಕರ ಬಳಿಗೆ ಹೋಗಿ, ಪಕ್ಷದೊಳಗೆ ತೀರ್ಮಾನ ತೆಗೆದುಕೊಳ್ಳಿ. ನೀವು ಶಾಸಕ ಸಭೆಯ ಸದಸ್ಯರಾಗಿರುವವರೆಗೆ ನೀವು ಸದನದ ಶಿಸ್ತಿಗೆ ಬದ್ಧರಾಗಿರಬೇಕು. ನೀವು ನಿಮ್ಮ ಪಕ್ಷದ ಜೊತೆಗೆ ಮತ ಚಲಾಯಿಸಬೇಕು

ಎಂದು ಸಿಜೆಐ ಡಿವೈ ಚಂದ್ರಚೂಡ್​ ಅವರು ಅಭಿಪ್ರಾಯಪಟ್ಟಿದ್ದಾರೆ.

ಸಿಜೆಐ ಡಿವೈ ಚಂದ್ರಚೂಡ್​, ನ್ಯಾಯಮೂರ್ತಿ ಎಂಆರ್​ ಶಾಹಾ, ನ್ಯಾಯಮೂರ್ತಿ ಕೃಷ್ಣ ಮುರಾರಿ, ನ್ಯಾಯಮೂರ್ತಿ ಹಿಮಾ ಕೊಹ್ಲಿ, ನ್ಯಾಯಮೂರ್ತಿ ಪಿ ಎಸ್​ ನರಸಿಂಹ ಪೀಠದಲ್ಲಿ ಇವತ್ತೂ ವಿಚಾರಣೆ ಮುಂದುವರೆಯಲಿದೆ.

LEAVE A REPLY

Please enter your comment!
Please enter your name here