ADVERTISEMENT
ಬ್ರಿಟನ್ಗೆ ಓಡಿಹೋಗಿರುವ ಉದ್ಯಮಿ ವಿಜಯ್ ಮಲ್ಯಗೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಾಲ್ಕು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
ಜೊತೆಗೆ 2 ಸಾವಿರ ರೂಪಾಯಿ ದಂಡ ವಿಧಿಸಿದೆ.
ಅದಲ್ಲದೇ 40 ದಶಲಕ್ಷ ಡಾಲರ್ನ್ನು ಜಮೆ ಮಾಡುವಂತೆಯೂ ಸೂಚಿಸಿದೆ.
ಎಸ್ಬಿಐ ಸೇರಿದಂತೆ ಬ್ಯಾಂಕುಗಳಿಂದ ತೆಗೆದುಕೊಂಡಿದ್ದ ಸಾಲದಲ್ಲಿ 40 ದಶಲಕ್ಷ ಡಾಲರ್ನಷ್ಟು ಮೊತ್ತವನ್ನು ಕಾನೂನುಬಾಹಿರವಾಗಿ ತನ್ನ ಮಕ್ಕಳ ಹೆಸರಿಗೆ ವಿಜಯ್ ಮಲ್ಯ ವರ್ಗಾಯಿಸಿದ್ದ.
ಈತನ ವಿರುದ್ಧ 2017ರಲ್ಲಿ ಬ್ಯಾಂಕ್ ವಂಚನೆ ಆರೋಪ ಸಾಬೀತಾಗಿತ್ತು.
8 ವಾರದೊಳಗೆ ಇಷ್ಟೂ ಮೊತ್ತವನ್ನು ಜಮೆ ಮಾಡುವಂತೆ ಇಲ್ಲವಾದಲ್ಲಿ ಮಲ್ಯಗೆ ಸಂಬಂಧಿಸಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ಯಾಂಕ್ಗಳಿಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ.
ಕೋರ್ಟ್ ಮುಂದೆ ಹಾಜರಾಗಲು ಸೂಚಿಸಿದ್ದರೂ ಹಾಜರಾಗದೇ ವಂಚಿಸಿದ ಪ್ರಕರಣದಲ್ಲಿ ಈತನ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಯು ಯು ಲಲಿತ್, ನ್ಯಾಯಮೂರ್ತಿ ರವೀಂದ್ರ ಭಟ್ ಮತ್ತು ಪಿ ಎಸ್ ನರಸಿಂಹ ಅವರಿದ್ದ ಪೀಠ ಈ ಆದೇಶ ನೀಡಿದೆ.
ADVERTISEMENT