ಚುನಾವಣಾ ತಜ್ಞ ಸುನಿಲ್​ ಕನಗೋಲು ಈಗ CM ಸಿದ್ದರಾಮಯ್ಯ ಅವರ ಮುಖ್ಯ ಸಲಹೆಗಾರರ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪ್ರಚಂಡ ಗೆಲುವಿಗೆ ಚುನಾವಣಾ ರಣತಂತ್ರಗಳ ಸಲಹೆಗಾರರಾಗಿದ್ದ ಚುನಾವಣಾ ತಜ್ಞ ಸುನಿಲ್​ ಕನುಗೋಲು ಅವರನ್ನು ಸಿಎಂ ಸಿದ್ದರಾಮಯ್ಯ ಅವರ ಮುಖ್ಯ ಸಲಹೆಗಾರರಾಗಿ ನೇಮಕ ಮಾಡಲಾಗಿದೆ.
ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಸುನಿಲ್​ ಕನುಗೋಲು ಅವರನ್ನು ನೇಮಕ ಮಾಡಿ ಸಿಎಂ ಸಿದ್ದರಾಮಯ್ಯ ಸರ್ಕಾರ ಆದೇಶಿಸಿದೆ.
ಬಿಹಾರದಲ್ಲಿ ಸಿಎಂ ನಿತೀಶ್​ ಕುಮಾರ್​ ಅವರು ಚುನಾವಣಾ ತಜ್ಞ ಪ್ರಶಾಂತ್​ ಕಿಶೋರ್​ ಅವರನ್ನು ತಮ್ಮ ಮುಖ್ಯ ಸಲಹೆಗಾರರನ್ನಾಗಿ ನೇಮಿಸಿ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದರು.