ಕೊಡವರನ್ನು ಕೊಂದ ಟಿಪ್ಪು ಸುಲ್ತಾನ್​, ಇತಿಹಾಸ ಅಳಿಸುವುದು ಅಪಾಯಕಾರಿ – ಬಿಜೆಪಿಗೆ ಬೆಂಬಲ ಬಳಿಕ ಸುಮಲತಾ ನಿಲುವು ಬದಲು..!

ಬಿಜೆಪಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ ಬಳಿಕ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ಅವರು ಮೈಸೂರು ಹುಲಿ ಟಿಪ್ಪು ಸುಲ್ತಾನ್​ ಬಗ್ಗೆ ತಮ್ಮ ನಿಲುವು ಬದಲಾಯಿಸಿಕೊಂಡಿದ್ದಾರೆ.

ಅಕ್ಟೋಬರ್​ 31, 2021:

ಟಿಪ್ಪು ಸುಲ್ತಾನ್​ ಪಠ್ಯವನ್ನು ಏಕಾಏಕಿ ಪಠ್ಯದಿಂದ ಕೈಬಿಟ್ಟಿದ್ದು ತಪ್ಪು ಎಂದು ಸುಮಲತಾ ಅಂಬರೀಶ್​ ಹೇಳಿಕೆ ನೀಡಿದ್ದರು. ಆ ಮೂಲಕ ಬಿಜೆಪಿ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದರು.

ಚುನಾವಣೆ ವೇಳೆ ಟಿಪ್ಪು ಸಮಾಧಿಗೆ ಭೇಟಿ:

2019ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಏಪ್ರಿಲ್​ 12ರಂದು ಟಿಪ್ಪು ಸುಲ್ತಾನ್​ ಮತ್ತು ಹೈದರಾಲಿ ಸಮಾಧಿಗೆ ಭೇಟಿ ನೀಡಿ ಹೂವಿನ ಚಾದರ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದ್ದರು. ಈ ವೇಳೆ ಮುಸಲ್ಮಾನ ಧರ್ಮಗುರುಗಳೂ ಸುಮಲತಾ ಅವರ ಜೊತೆಗಿದ್ದರು. 

ಉರಿಗೌಡ, ನಂಜೇಗೌಡ ಬಗ್ಗೆ ನಿರ್ಮಲಾನಂದ ಸ್ವಾಮೀಜಿ ಅವರ ಹೇಳಿಕೆಯ ವೀಡಿಯೋವನ್ನು ಪತ್ರಕರ್ತ ಎಸ್​ ಶ್ಯಾಮ್​ಪ್ರಸಾದ್​ ಅವರು ಇದ್ದಿದ್ದು ಇದೊಂದೇ ಎಲೆಕ್ಷನ್ ವಿಷ ಯ. ಈಗೇನು ಮಾಡೋದು? ಎಂದು ಹೇಳಿ ಟ್ವೀಟಿಸಿದ್ದರು.  ಇದಕ್ಕೆ ಪ್ರತಿಕ್ರಿಯಿಸಿರುವ ಸುಮಲತಾ ಅವರು ಟಿಪ್ಪು ಕೊಡವರನ್ನು ಕೊಂದವ ಎಂದಿದ್ದಾರೆ. 

ಕೊಡವರನ್ನು ಕೊಂದ ಟಿಪ್ಪು: ಸುಮಲತಾ ಟ್ವೀಟ್​

ನಿಜಕ್ಕೂ ತಿಳಿಯ ಬಯಸುತ್ತೇನೆ..ನೂರಾರು ಅಥವಾ ಸಾವಿರಾರು ಕೊಡವರನ್ನು ಅಮಾನುಷವಾಗಿ ಕೊಂದ ಬಗ್ಗೆ ಏನು ಹೇಳುತ್ತೀರಿ..? ಅದೂ ಸೃಷ್ಟಿಸಿದ್ದೇನಾ..? ಇದನ್ನು ನೀವು ಕೊಡವರಿಗೆ ಹೇಳಲು ಸಿದ್ಧರಿದ್ದೀರಾ..? ನನ್ನ ಪ್ರೀತಿಯ ಗೆಳತಿ ಅಶ್ವಿನಿನಾಚಪ್ಪರಿಂದ ಅವರ ಅಭಿಪ್ರಾಯ ಕೇಳಲು ಬಯಸುತ್ತೇನೆ, ಇದರ ಬಗ್ಗೆ ಚರ್ಚೆ ಮಾಡೋಣ.

ದುರಾದೃಷ್ಟ ಎಂದರೆ ಕೆಲವರು ಹಬ್ಬಿಸುತ್ತಿರುವ ಅಭಿಪ್ರಾಯಕ್ಕೆ ಇದು ಸರಿ ಹೊಂದುತ್ತಿಲ್ಲ. ಇತಿಹಾಸವನ್ನು ಸೃಷ್ಟಿಸುವುದು ಬೇರೆ, ಆದ್ರೆ ಇತಿಹಾಸದ ಭಾಗವನ್ನು ಅಳಿಸಿಹಾಕುವುದು..ಅಪಾಯಕಾರಿ

ಎಂದು ಸುಮಲತಾ ಅಂಬರೀಶ್​ ಅವರು ಟ್ವೀಟಿಸಿದ್ದಾರೆ.