ಟ್ವಿಟ್ಟರ್ನಲ್ಲಿ ಸುಳ್ಳು ಮತ್ತು ಪ್ರಚೋದನಕಾರಿ ಪೋಸ್ಟ್ ಹಾಕಿದ್ದ ಸುದರ್ಶನ ನ್ಯೂಸ್ ಚಾನೆಲ್ನ ಸ್ಥಾನೀಯ ಸಂಪಾದಕ ಮುಖೇಶ್ ಕುಮಾರ್ ಅವರನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ.
ಗುರುಗ್ರಾಮ ನಗರದ ಗುರುಗ್ರಾಮ ಸೈಬರ್ ಸ್ಟೇಷನ್ ಪೂರ್ವ ಪೊಲೀಸರು ಬಂಧಿಸಿದ್ದಾರೆ.
ಹರಿಯಾಣದಲ್ಲಿ ಸಿಎಂ ಮನೋಹರ್ ಲಾಲ್ ಕಟ್ಟರ್ ನೇತೃತ್ವದ ಬಿಜೆಪಿ ಸರ್ಕಾರವಿದ್ದು, ಸುದರ್ಶನ ಟಿವಿ ಚಾನೆಲ್ ಬಲಪಂಥೀಯ ಚಾನೆಲ್ ಆಗಿದೆ.
ನೂಹ್ ಹಿಂಸಾಚಾರದ ಬಳಿಕ ಚಾನೆಲ್ ಸ್ಥಾನಿಯ ಸಂಪಾದಕರಾಗಿರುವ ಮುಖೇಶ್ ಕುಮಾರ್ ಪ್ರಚೋದನಕಾರಿ ಟ್ವೀಟ್ ಮಾಡಿದ್ದರು.
ಕತಾರ್ ನ್ಯೂಸ್ ಏಜೆನ್ಸಿ ಅಲ್ ಜಝೀರಾ ಹಿಂದೂಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಗುರುಗ್ರಾಮ ಪೊಲೀಸ್ ಆಯುಕ್ತರ ಮೇಲೆ ಒತ್ತಡ ಹಾಕುತ್ತಿದೆ
ಎಂದು ಆಗಸ್ಟ್ 8ರಂದು ಪ್ರಚೋದನಕಾರಿ ಟ್ವೀಟ್ ಮಾಡಿದ್ದರು.
ಆದರೆ ಸುದರ್ಶನ್ ಟಿವಿ ಚಾನೆಲ್ ಸ್ಥಾನಿಯ ಸಂಪಾದಕ ಮುಖೇಶ್ ಕುಮಾರ್ ಅವರನ್ನು ಅಪಹರಣ ಮಾಡಲಾಗಿದೆ ಎಂದು ವಾದಿಸಿತ್ತು. ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಕಾರಿನಿಂದ ಎಳೆದು ಅಪಹರಣ ಮಾಡಲಾಗಿದೆ ಎಂದು ಟ್ವೀಟಿಸಿತ್ತು.
ADVERTISEMENT
ADVERTISEMENT