Standard Chartered Bank : ಕರೆ ಮಾಡಿ ಗ್ರಾಹಕನಿಗೆ ಚಿತ್ರಹಿಂಸೆ : 2 ಲಕ್ಷ ದಂಡ

Standard Charted Bank

ಸಾಲ ಪಾವತಿ ಮಾಡಿದ್ದರೂ ಗ್ರಾಹಕನಿಗೆ ಕರೆ ಮಾಡಿ ಚಿತ್ರಹಿಂಸೆ ನೀಡಿದ್ದ ಸ್ಟಾಂಡರ್ಡ್​​ ಚಾರ್ಟೆಡ್ ಬ್ಯಾಂಕ್​ಗೆ(Standard Chartered Bank)  2 ಲಕ್ಷ ರೂ. ದಂಡ ಹಾಕಿ ಗ್ರಾಹಕ ಆಯೋಗ ತೀರ್ಪು ನೀಡಿದೆ.

ವಕೀಲ ಲೋಕನಾಥನ್ ಜಯಕುಮಾರ್ ಎನ್ನುವವರು ಸ್ಟಾಂಡರ್ಡ್​​ ಚಾರ್ಟೆಡ್ ಬ್ಯಾಂಕ್​ನಿಂದ(Standard Chartered Bank) ಸಾಲ ಪಡೆದಿದ್ದರು. ಸಾಲದ ಅವಧಿಯಲ್ಲಿಯೇ ಹಣ ಮರುಪಾವತಿ ಮಾಡಿದ್ದರು. ಆದಾಗ್ಯೂ, ಬ್ಯಾಂಕ್ ಅವರಿಗೆ ಬರೋಬ್ಬರಿ 58 ಬಾರಿ ಕರೆ ಮಾಡಿ ಸಾಲ ಮರುಪಾವತಿಸುವಂತೆ ಕೇಳಿಕೊಂಡಿತ್ತು. ಇದರಿಂದ ಬೇಸತ್ತಿದ್ದ ಲಾಯರ್ ಗ್ರಾಹಕ ವ್ಯಾಜ್ಯಗಳ ಪರಿಹಾರದ ಆಯೋಗಕ್ಕೆ ಅರ್ಜಿ ಸಲ್ಲಿಸಲ್ಲಿಸಿದ್ದರು.

75 ವರ್ಷದ ವಕೀಲ ಲೋಕನಾಥನ್ ಜಯಕುಮಾರ್ ಕೋರಮಂಗಲ ನಿವಾಸಿಯಾಗಿದ್ದು, 25 ವರ್ಷಗಳಿಂದ ಸ್ಟಾಂಡರ್ಡ್ ಚಾರ್ಟೆಡ್ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಹೊಂದಿದ್ದಾರೆ. ಬಾಕಿ ಪಾವತಿಸಬೇಕಿದ್ದ, 31,271 ರೂಪಾಯಿಗಳ ಹಣವನ್ನು ಗಡುವು ಮಿತಿಗೂ ಮುನ್ನವೇ 2022 ರ ಜನವರಿಯಂದು ಚೆಕ್ ಮೂಲಕ ಪಾವತಿಸಿದ್ದರು.

ಇದನ್ನೂ ಓದಿ : ಹೆಲ್ಮೇಟ್ ಹಾಕದೇ ರೀಲ್ಸ್ ಮಾಡಿದ ಟಿಕ್​ಟಾಕ್ ಸ್ಟಾರ್​​ : 17,500 ರೂ. ದಂಡ

ಗ್ರಾಹಕ ವ್ಯಾಜ್ಯಗಳ ಆಯೋಗದ ತೀರ್ಪು :

ಗ್ರಾಹಕ ವ್ಯಾಜ್ಯಗಳ ಪರಿಹಾರದ ಆಯೋಗದಲ್ಲಿ ಲಾಯರ್ ಲೋಕನಾಥನ್ ಜಯಕುಮಾರ್ ಅವರ ಅರ್ಜಿಯ ವಿಚಾರಣೆ ನಡೆದಿದೆ. ಗ್ರಾಹಕ ಸೂಕ್ತ ಸಮಯದಲ್ಲಿ ಹಣ ಪಾವತಿಸಿದ್ದರೂ ಬ್ಯಾಂಕ್ ನ ಲೋಪದೋಷಗಳು ಸ್ಪಷ್ಟವಾಗಿತ್ತು.

ಅಲ್ಲದೇ, ನೋಟಿಎಸ್ ಜಾರಿ ಮಾಡಿದ್ದರೂ ಬ್ಯಾಂಕ್ ಅದಕ್ಕೆ ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ. ಇದರಿಂದ ಬ್ಯಾಂಕ್​​ನದ್ದೇ ತಪ್ಪು ಎಂದು ಪರಿಗಣಿಸಿದ ಬೆಂಗಳೂರು ನಗರ ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಸಂತ್ರಸ್ತ ವ್ಯಕ್ತಿಗೆ 2 ಲಕ್ಷ ರೂಪಾಯಿ ಮೊತ್ತಕ್ಕೆ ಪ್ರತಿ ವರ್ಷಕ್ಕೆ ಶೇ.8 ರಷ್ಟು ಬಡ್ಡಿ ಸೇರಿಸಿ ಪರಿಹಾರವನ್ನು ನೀಡಬೇಕು. ಜೊತೆಗೆ ದಾವೆ ವೆಚ್ಚಗಳಿಗಾಗಿ ಹೆಚ್ಚುವರಿ 10,000 ರೂಪಾಯಿ ಹಣ ನೀಡಬೇಕು ಎಂದು ತೀರ್ಪು ನೀಡಿದೆ.

ಇದನ್ನೂ ಓದಿ : ಗ್ರಾಹಕನಿಗೆ ನಕಲಿ ಚಿನ್ನ ನೀಡಿ ವಂಚನೆ : ಕೋಶಮಟ್ಟಂ ಫೈನಾನ್ಸ್​ನಿಂದ ಮಹಾ ದೋಖಾ

LEAVE A REPLY

Please enter your comment!
Please enter your name here