ದಿವಾಳಿ ಎದ್ದಿರುವ ಶ್ರೀಲಂಕಾ ದೇಶದ ಅಧ್ಯಕ್ಷ ಗೊಟಬಾಯ ರಾಜಪಕ್ಷ ಓಡಿಹೋಗಿದ್ದಾರೆ ಎಂದು ವರದಿ ಆಗಿದೆ.
ಗೊಟಬಾಯ ರಾಜಪಕ್ಷ ರಾಜೀನಾಮೆಗೆ ಒತ್ತಾಯಿಸಿ ಶ್ರೀಲಂಕಾದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದೆ.
ರಾಜಧಾನಿ ಕೊಲಂಬೋದಲ್ಲಿರುವ ಸರ್ಕಾರಿ ನಿವಾಸದಿಂದ ರಾಜಪಕ್ಷ ಓಡಿಹೋಗಿದ್ದಾರೆ ಎಂದು ಶ್ರೀಲಂಕಾ ಸೇನಾಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿ ಆಗಿದೆ.
ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದರು.
ಈ ಹಿಂದೆ ಗೊಟಬಾಯ ರಾಜಪಕ್ಷ ಅವರ ಅಣ್ಣ ಪ್ರಧಾನಮಂತ್ರಿ ಆಗಿದ್ದ ಮಹೀಂದ್ರ ರಾಜಪಕ್ಷ ಕೂಡಾ ಕುಟುಂಬ ಸಮೇತ ಪರಾರಿ ಆಗಿದ್ದರು.