ಇವತ್ತು ಆಕಾಶದಲ್ಲಿ ಆದ ಆ ಅಚ್ಚರಿಯ ಪ್ರಯೋಗ..! ಆ ಆಕಾಶಕಾಯಕ್ಕೆ ರಾಕೆಟ್ ಡಿಕ್ಕಿ..!

ಕ್ಷುದ್ರಗ್ರಹಗಳಿಗೆ ಡಿಕ್ಕಿ ಹೊಡೆಸಿ ಅವುಗಳ ಪಥವನ್ನು ಬದಲಿಸಿ ಭವಿಷ್ಯದಲ್ಲಿ ಭೂಮಿಯನ್ನು ಕ್ಷುದ್ರಗ್ರಹಗಳಿಂದ ಕಾಪಾಡಬಹುದೇ ಎಂಬ ಅಧ್ಯಯವನ್ನು ಕೈಗೊಳ್ಳುವ ಸಲುವಾಗಿ ಮಾನವನ ವಿಜ್ಞಾನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತನ್ನ ಮೊದಲ ಪ್ರಯೋಗ ಕೈಗೊಂಡಿದೆ.

ಡಬಲ್ ಆಸ್ಟಾçಯಿಡ್ ರಿಡೈರೆಕ್ಷನ್ ಟೆಸ್ಟ್ (ದ್ವಿ ಕ್ಷುದ್ರಗ್ರಹ ಪಥ ಬದಲಾವಣೆ ಪರೀಕ್ಷೆ) ಹೆಸರಲ್ಲಿ ಫಾಲ್ಕನ್-9 ಹೆಸರಿನ ರಾಕೆಟ್ ಅಮೆರಿಕ ಕ್ಯಾಲಿಫೋರ್ನಿಯಾದಲ್ಲಿರುವ ಬಾಹ್ಯಾಕಾಶ ಕೇಂದ್ರದಿAದ ಇವತ್ತು ಬೆಳಗ್ಗೆ ನಭಕ್ಕೆ ಚಿಮ್ಮಿದೆ.

ಏನಿದು ಮಿಷನ್..?

ಡಾರ್ಟ್ (ಡಿಎಆರ್‌ಟಿ) ಸಣ್ಣ ಡಿಮರ‍್ಫೋಸ್ ಹೆಸರಿನ ಮೂನ್‌ಲೆಟ್ ಕ್ಷುದ್ರಗ್ರಹ ಇರುವ ಎರಡು ಕ್ಷುದ್ರಗ್ರಹಗಳ ವ್ಯವಸ್ಥೆಗೆ ಪ್ರವೇಶಿಸಲಿದೆ. ಈ ಡಿಮರ‍್ಫೋಸ್ ಇನ್ನೊಂದು ದೊಡ್ಡ ಕ್ಷುದ್ರಗ್ರಹ ಡಿಡಿಮೋಸ್ ಸುತ್ತ ಸುತ್ತುತ್ತಿದೆ.

ಈ ಎರಡೂ ಕ್ಷುದ್ರಗ್ರಹಗಳು ಸೂರ್ಯನ ಸುತ್ತ ಸುತ್ತಿದ್ದು, ಭೂಮಿಯಿಂದ 10 ರಿಂದ 493 ಮಿಲಿಯನ್ ಕಿಲೋ ಮೀಟರ್ ದೂರದಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಈ ಎರಡೂ ಕ್ಷುದ್ರಗ್ರಹಗಳು ಭೂಮಿಗೆ ಆತಂಕಕಾರಿಯಾಗಿಲ್ಲ.

ಡಾರ್ಟ್ ಮುಖ್ಯ ಗುರಿ ಡಿಮರ‍್ಫೋಸ್. ಇವತ್ತು ರಾಕೆಟ್ ಉಡಾವಣೆಯ ಉದ್ದೇಶ ಕ್ಷುದ್ರಗ್ರಹಗಳಿಂದ ಭೂಮಿಯ ರಕ್ಷಣೆಯ ಬಗ್ಗೆ ತಿಳಿದುಕೊಳ್ಳುವುದು. ಈ ರಾಕೆಟ್ ನೇರವಾಗಿ ಆ ಸಣ್ಣ ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆಯಲಿದ್ದು ಆ ಮೂಲಕ ಡಿಡಿಮೋಸ್ ಸುತ್ತ ಅದರ ಕಕ್ಷೆಯನ್ನು ಮಾರ್ಪಾಡು ಮಾಡಲಿದೆ. ಆ ಮೂಲಕ ಡಿಡಿಮೋಸ್‌ನ ಸುತ್ತ ಮೂನ್‌ಲೆಟ್ ಗಾತ್ರದ ಕ್ಷುದ್ರಗ್ರಹದ ಕಕ್ಷಾ ಅವಧಿಯನ್ನು ಕಡಿತಗೊಳಿಸುವ ಉದ್ದೇಶ.

ಡಾರ್ಟ್ ಡಿಕ್ಕಿ ಹೊಡೆದು ಅದರಿಂದ ಆಗುವ ಕಕ್ಷಾ ಬದಲಾವಣೆಯಲ್ಲಾಗುವ ಪರಿಣಾಮಗಳ ನಿಖರ ಮಾಹಿತಿಯನ್ನು ಗ್ರಹಿಸಲಯ ರಾಕೆಟ್‌ನಲ್ಲಿ ಟೆಲಿಸ್ಕೋಪ್ ಅಳವಡಿಸಲಾಗಿದೆ.

ಮೊದಲೇ ಹೇಳಿದಂತೆ ಈ ಎರಡೂ ಕ್ಷುದ್ರಗ್ರಹಗಳಿಂದ ಭೂಮಿಗೆ ಏನೂ ಅಪಾಯವವಿಲ್ಲ, ಅಥವಾ ಈಗ ನಡೆದಿರುವ ಪರೀಕ್ಷೆಯಿಂದ ಭೂಮಿ ಕ್ಷುದ್ರಗ್ರಹಗಳಿಂದ ಸುರಕ್ಷಿತವಾಗಿದೆ ಎಂದು ಅರ್ಥವೂ ಅಲ್ಲ. ಆದರೆ ಇಂತಹ ಆಕಾಶ ಕಾಯಗಳಿಂದ ಭೂಮಿಯನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬಹುದು ಎಂಬ ಪ್ರರೀಕ್ಷಾರ್ಥ ಪ್ರಯೋಗವಷ್ಟೇ. ಒಂದು ವೇಳೆ ಭವಿಷ್ಯದಲ್ಲಿ ದೊಡ್ಡದೊಂದು ಕ್ಷುದ್ರಗ್ರಹ ಭೂಮಿಗೆ ಅಪಾಯ ಉಂಟು ಮಾಡಬಹುದು ಎಂದು ಕಂಡುಬAದಲ್ಲಿ ಆಗ ಇದೇ ತಂತ್ರಜ್ಞಾನವನ್ನು ಬಳಸಿ ರಾಕೆಟ್ ಉಡಾಯಿಸಿ ಆ ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆಸಿ ಅದು ಭೂಮಿಗೆ ಅಪ್ಪಳಿಸದಂತೆ ನೋಡಿಕೊಳ್ಳಬಹುದು. ನಾಸಾದ ಇವತ್ತಿನ ಪ್ರಯೋಗದ ಉದ್ದೇಶವೇ ಅದು.

LEAVE A REPLY

Please enter your comment!
Please enter your name here