ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಘೋಷಣೆ ಬಳಿಕ ಕಾಂಗ್ರೆಸ್ ಅಸಮಾಧಾನ ಬಹಿರಂಗಗೊಂಡಿದೆ.
`ನನ್ನ ತಪ್ಪಸ್ಸಿನಲ್ಲಿ ಏನಾದರೂ ಕಮ್ಮಿ ಆಗಿರಬೇಕು’ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಪವನ್ ಖೇರಾ ರಾತ್ರಿ 11 ಗಂಟೆಗೆ ಟ್ವೀಟಿಸಿದ್ದಾರೆ.
ಈ ಮೂಲಕ ತಮ್ಮನ್ನು ರಾಜ್ಯಸಭಾ ಸಂಸದ ಸ್ಥಾನಕ್ಕೆ ತಮ್ಮನ್ನು ಪರಿಗಣಿಸದ ಪಕ್ಷದ ವಿರುದ್ಧವೇ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ.
ಇವತ್ತು ಬೆಳಗ್ಗೆ ಮತ್ತೆ ಟ್ವೀಟಿಸಿರುವ ಪವನ್ ಖೇರಾ, `ನನಗೆ ಗುರುತು ಕೊಟ್ಟಿದ್ದು ಕಾಂಗ್ರೆಸ್. ಆ ಮಾತಿಗೆ ನನ್ನ ಸಹಮತ ಇದೆ ಮತ್ತು ಅದಕ್ಕೆ ಬದ್ಧನಾಗಿರುತ್ತೇನೆ’ ಎಂದೂ ಟ್ವೀಟಿಸಿದ್ದಾರೆ.
ಕರ್ನಾಟಕದಲ್ಲಿ ಮತ್ತೆ ಜೈರಾಂ ರಮೇಶ್ ಅವರಿಗೆ ಟಿಕೆಟ್ ಕೊಟ್ಟಿರುವುದು ಕರ್ನಾಟಕ ಕಾಂಗ್ರೆಸ್ನಲ್ಲೂ ಭಿನ್ನಮತಕ್ಕೆ ಕಾರಣ ಆಗಿದೆ.