ದಕ್ಷಿಣ ಕನ್ನಡದಲ್ಲಿ ನಡೆದ ಪೊಲೀಸ್ ಅನೈತಿಕಗಿರಿ ಸಂಬಂಧ ಏಳು ಮಂದಿಯನ್ನು ಬಂಧಿಸಲಾಗಿದೆ.
ಉಲ್ಲಾಳ ಬಸ್ತಪಡ್ಪು ನಿವಾಸಿ ಯತೀಶ್, ಉಚ್ಚಿಲ ಮೂಲದ ನಿವಾಸಿ ಸಚಿನ್, ತಳಪಾಡಿಯ ಮೋಕ್ಷಿತ್ ಮತ್ತು ಸುಹಾನ್ ಎಂಬ ನಾಲ್ವರು ದುಷ್ಕರ್ಮಿಗಳನ್ನು ಉಲ್ಲಾಳ ಪೊಲೀಸರು ಬಂಧಿಸಿದ್ದಾರೆ. ಈ ನಾಲ್ವರು ಕೊಟ್ಟ ಮಾಹಿತಿಯ ಮೇರೆಗೆ ಉಳಿದ ಮೂವರನ್ನು ಬಳಿಕ ಬಂಧಿಸಲಾಗಿದೆ.
ಬಂಧಿತ ನಾಲ್ವರೂ ಹಿಂದೂ ಸಂಘಟನೆಯೊಂದರ ಸದಸ್ಯರು ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನೂ ಉಳಿದ ಮೂವರಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.
ಪ್ರಕರಣ ಏನು..?
ನಿನ್ನೆ ರಾತ್ರಿ ಸೋಮೇಶ್ವರ ಬೀಚ್ನಲ್ಲಿ ದುಷ್ಕರ್ಮಿಗಳು ಅನೈತಿಕ ಪೊಲೀಸ್ಗಿರಿ ನಡೆಸಿದ್ದರು. ಕೇರಳ ಮೂಲದ ಜಾಫರ್ ಶರೀಫ್, ಮುಜೀಬ್ ಮತ್ತು ಆಶೀಕ್ ಎಂಬ ಮೂವರು ಅರೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿತ್ತು. ಈ ಮೂವರು ವಿದ್ಯಾರ್ಥಿಗಳು ಬೇರೆ ಧರ್ಮದ ಮೂವರು ವಿದ್ಯಾರ್ಥಿನಿಯರೊಂದಿಗೆ ಇದ್ದರು ಎಂಬ ಕಾರಣಕ್ಕೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು.
ಪ್ರಕರಣದ ತನಿಖೆಗಾಗಿ ಎರಡು ವಿಶೇಷ ತಂಡ ರಚಿಸಲಾಗಿದೆ. ಈ ಮೂವರು ವಿದ್ಯಾರ್ಥಿನಿಯರೂ ಕೇರಳ ಮೂಲದವರಾಗಿದ್ದು ಅವರ ಮೇಲೆ ಹಲ್ಲೆ ನಡೆದಿದ್ದು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ADVERTISEMENT
ADVERTISEMENT