Sologamy Marriage : ತನ್ನನ್ನು ತಾನೇ ವಿವಾಹವಾದ ನಟಿ ಕನಿಷ್ಕಾ ಸೋನಿ

Sologamy Marriage

ಕಿರುತೆರೆ ನಟಿ ಕನಿಷ್ಕಾ ಸೋನಿಯ(Kaniska Soni)ವರು ತಮ್ಮನ್ನು ತಾವೇ ವಿವಾಹವಾಗುವ(Sologamy Marriage) ಮೂಲಕ ಸುದ್ದಿಯಾಗಿದ್ದಾರೆ.

‘ದಿಯಾ ಹೌರ್ ಬಾತಿ ಹಮ್’ ಮತ್ತು ‘ಪವಿತ್ರ ರಿಷ್ತ’ ಎಂಬ ಧಾರಾವಾಹಿಗಳ ಮೂಲಕ ಪ್ರಸಿದ್ಧಿಗಳಿಸಿದ್ದ ಕನಿಷ್ಕಾ ಸೋನಿ(Kaniska Soni) ಸ್ವ ವಿವಾಹವಾಗಿದ್ದಾರೆ(Sologamy Marriage).

ಈ ಬಗ್ಗೆ ಅವರೇ ಸಾಮಾಜಿಕ ಜಾಲತಾಣ ಇನ್​​​ಸ್ಟಾಗ್ರಾಂನಲ್ಲಿ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಹಣೆಗೆ ಸಿಂಧೂರ ಹಾಗೂ ಕೊರಳಲ್ಲಿ ಮಂಗಳ ಸೂತ್ರ ಧರಿಸಿರುವ ಪೋಟೋ ಹಾಕಿಕೊಂಡಿರುವ ಅವರು, ನನ್ನನ್ನು ನಾನೇ ವಿವಾಹವಾಗಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ನಟಿ ಅನುಷ್ಕಾ ಶೆಟ್ಟಿ ಮದುವೆ ಯಾವಾಗ? ಯಾರ ಜೊತೆಗೆ?

ತಮ್ಮ ಪೋಸ್ಟ್‌ನಲ್ಲಿ, ‘ನನ್ನನ್ನೇ ಮದುವೆಯಾಗಿದ್ದೇನೆ, ಏಕೆಂದರೆ ನಾನು ನನ್ನ ಎಲ್ಲಾ ಕನಸುಗಳನ್ನು ಪೂರೈಸಿದ್ದೇನೆ ಮತ್ತು ನನ್ನನ್ನು ಪ್ರೀತಿಸುವ ಏಕೈಕ ವ್ಯಕ್ತಿ ನಾನೇ ಆಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ನಟಿ ಕಾನಿಷ್ಕಾ ಸೋನಿ ಸ್ವವಿವಾಹದ ಬಗ್ಗೆ ಅಗಸ್ಟ್​​ 6 ರಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಿದ್ದಂತೆಯೇ ಸಾಕಷ್ಟು ವೈರಲ್ ಆಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಪರವಾಗಿ ಹಾಗೂ ವಿರೋಧವಾಗಿ ಜನ ಕಾಮೆಂಟ್ ಮಾಡುತ್ತಿದ್ದಾರೆ.

ಮತ್ತೆ 6 ನಿಮಿಷಗಳ ವಿಡಿಯೋ ಮಾಡಿ ಹರಿಬಿಟ್ಟಿರುವ ನಟಿ ಕಾನಿಷ್ಕಾ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಹಾಗೆಯೇ, ಹಾಲಿವುಡ್​ನಲ್ಲಿ ತಮ್ಮ ವೃತ್ತಿ ಜೀವನ ಕಟ್ಟಿಕೊಳ್ಳುವ ಪ್ರಯತ್ನ ನಡೆಸುತ್ತಿರುವ ಬಗ್ಗೆಯೂ ಹೇಳಿದ್ದಾರೆ.

ಇದನ್ನೂ ಓದಿ : Sologamy – ತನ್ನನ್ನು ತಾನೇ ಮದುವೆ  ಮಾಡಿಕೊಳ್ಳುತ್ತಿರುವ ಯುವತಿ! ಗೋವಾದಲ್ಲಿ ಹನಿಮೂನ್ ಪ್ಲಾನ್!

ಇತ್ತೀಚೆಗೆ, ಗುಜರಾತ್ ಮೂಲದ 24 ವರ್ಷದ ಯುವತಿ ಕ್ಷಮಾ ಬಿಂದು ತನ್ನನ್ನೇ ತಾನು ವಿವಾಹವಾಗುವ ಮೂಲಕ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು.

LEAVE A REPLY

Please enter your comment!
Please enter your name here