ವಯಸ್ಸಾಗುವುದು ಅನಿವಾರ್ಯ. ಆದಾಗ್ಯೂ, ನಮ್ಮ ಅನಿಯಮಿತ ಮತ್ತು ಒತ್ತಡದ ಜೀವನಶೈಲಿ ಮತ್ತು ಕೆಲವು ಪರಿಸರ ಅಂಶಗಳ ಕಾರಣದಿಂದಾಗಿ, ಅಕಾಲಿಕ ವಯಸ್ಸಾಗುವಿಕೆ ಸಾಮಾನ್ಯವಾಗುತ್ತಿದೆ. ಆದರೆ, ನೀವು ನಿಮ್ಮ ಆಹಾರದ ಮೇಲೆ ಹೆಚ್ಚಿನ ಗಮನಹರಿಸುವ ಮೂಲಕ ಬೇಗನೆ ವಯಸ್ಸಾದವರಂತೆ ಕಾಣವುದನ್ನು ನಿರ್ಬಂಧಿಸಬಹುದು.
“ನಾವು ಒತ್ತಡ ಮತ್ತು ರಾಸಾಯನಿಕಗಳ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಮನುಕುಲದ ಇತಿಹಾಸದಲ್ಲಿ ನಾವು ಅತಿದೊಡ್ಡ ಪರಿಸರ ಆಕ್ರಮಣವನ್ನು ಎದುರಿಸುತ್ತಿದ್ದೇವೆ. ನೀವು ನಿಮ್ಮ ಆಹಾರವನ್ನು ಬುದ್ಧಿವಂತಿಕೆಯಿಂದ ಆರಿಸದ ಹೊರತು, ರೋಗಗಳು ಮತ್ತು ಬೇಗನೆ ವಯಸ್ಸಾಗುವುದು ಅನಿವಾರ್ಯ ” ಎಂದು ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿಯವರು ಹೇಳಿದ್ದಾರೆ.
ತಾಜಾ ಹಣ್ಣುಗಳು ಮತ್ತು ತರಕಾರಿಗಳು ನಮ್ಮ ಜೀವಕೋಶಗಳನ್ನು “ಯುವ, ರೋಮಾಂಚಕ ಮತ್ತು ರೋಗ-ಮುಕ್ತವಾಗಿ” ಇರಿಸುತ್ತದೆ.. ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಅವು ಪ್ರಮುಖಚಾಗಿ ವಯಸ್ಸು ವಿರೋಧಿಯಾಗಿ ಕೆಲಸ ಮಾಡುತ್ತವೆ.
ಬೇಗನೆ ವಯಸ್ಸಾಗದಂತೆ ನಿರ್ಬಂಧಿಸುವ 6 ತರಕಾರಿ ಹಾಗೂ ಹಣ್ಣುಗಳ ಪಟ್ಟಿ ಇಲ್ಲಿದೆ.
ಎಲೆಕೋಸು :
ಎಲೆಕೋಸನ್ನು “ವಯಸ್ಸಾಗುವಿಕೆ ವಿರೋಧಿ ಶಕ್ತಿ ಕೇಂದ್ರ” ಎಂದು ಪೌಷ್ಟಿಕತಜ್ಞರು ಕರೆದಿದ್ದಾರೆ. ಎಲೆಕೋಸು ತರಕಾರಿಯು ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಮತ್ತು ಪ್ರತಿರಕ್ಷಣಾ ಕಾರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಗೆಜ್ಜರಿ (ಕ್ಯಾರೆಟ್) :
ಗೆಜ್ಜರಿಯೂ ವಯಸ್ಸಿನ ವಿರೋಧಿ ಶಕ್ತಿಯನ್ನು ಹೊಂದಿದೆ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಮತ್ತು ದೇಹದಲ್ಲಿ ಪ್ರತಿರಕ್ಷಣಾ ಕಾರ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ದ್ರಾಕ್ಷಿ :
ದ್ರಾಕ್ಷಿಯು ನಮ್ಮ ದೇಹದಲ್ಲಿನ ಜೀವಕೋಶಗಳು ದೇಹದಲ್ಲಿನ ಸೂಕ್ಷ್ಮಾಣು ಜೀವಿಗಳೊಂದಿಗೆ ಸ್ವತಂತ್ರವಾಗಿ ಹೋರಾಡಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಈರುಳ್ಳಿ :
ತಜ್ಞರ ಪ್ರಕಾರ, ಈರುಳ್ಳಿ ರಕ್ತವನ್ನು ತೆಳುಗೊಳಿಸಲು ಸಹಾಯ ಮಾಡುತ್ತದೆ, ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಈರುಳ್ಳಿಯೂ ಪ್ರಬಲವಾದ ವಯಸ್ಸು ವಿರೋಧಿ ಪ್ರಯೋಜನಗಳನ್ನು ಹೊಂದಿದೆ.
ಟೊಮ್ಯಾಟೋ :
ಟೊಮ್ಯಾಟೋ ಲೈಕೋಪೀನ್ ನ ಶ್ರೀಮಂತ ಮೂಲವಾಗಿದೆ. ಇದು “ಮೆದುಳಿನ ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡುವ ಗಮನಾರ್ಹವಾದ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಪ್ರಬಲವಾದ ಕ್ಯಾನ್ಸರ್ ವಿರೋಧಿ ಮತ್ತು ವಯಸ್ಸು ವಿರೋಧಿ ಗುಣಗಳನ್ನು ಟೊಮ್ಯಾಟೋ ಹೊಂದಿದೆ.
ಸೊಪ್ಪು :
ಪಾಲಕ್ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಪಾಲಕ್ ಸೊಪ್ಪು ವಯಸ್ಸು ವಿರೋಧಿ ಶಕ್ತಿಯನ್ನು ಹೊಂದಿದೆ. ಪಾಲಕ್ ಸೊಪ್ಪಿನಲ್ಲಿರುವ ಲುಟೀನ್ ಶಕ್ತಿಯುತ ವಯಸ್ಸಾದ ವಿರೋಧಿ ಗುಣಗಳನ್ನು ಹೊಂದಿದೆ ಮತ್ತು ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ. ಪಾಲಕ್ ಸೊಪ್ಪಿನಲ್ಲಿ ಫೋಲಿಕ್ ಆಸಿಡ್ ಸಮೃದ್ಧವಾಗಿದೆ, ಇದು ಡಿಎನ್‌ಎ ದುರಸ್ತಿಗೆ ಅಗತ್ಯವಾಗಿರುತ್ತದೆ, ಇದು ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.
ಇವಿಷ್ಟೇ ಅಲ್ಲದೇ, ಬೇಗನೆ ವಯಸ್ಸಾಗುವುದನ್ನು ತಡೆಯಲು ಪ್ರತಿ ಬಾರಿಯೂ ಊಟದಲ್ಲಿ ಸಾಕಷ್ಟು ತರಕಾರಿಗಳನ್ನು ಬಳಸಬೇಕು. ಹಣ್ಣು ಗಳನ್ನು ನಿಯಮಿತವಾಗಿ ಸೇವಿಸುತ್ತಿರಬೇಕು.