ಕೆಕೆ ಎಂದೇ ಪ್ರಸಿದ್ಧರಾಗಿದ್ದ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ ಇನ್ನಿಲ್ಲ.
ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮ ಮುಗಿದ ಬಳಿಕ ತಾವು ತಂಗಿದ್ದ ಹೋಟೆಲ್ ಮೆಟ್ಟಿನಲ್ಲೇ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತ್ತಾದರೂ ಅಷ್ಟೊತ್ತಿಗಾಗಲೇ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಸಂಗೀತ ಕಾರ್ಯಕ್ರಮದಲ್ಲೇ ತೀವ್ರವಾಗಿ ಬೆವರುತ್ತಿದ್ದ ಅವರು ಬಿಸಿ ಅತಿಯಾಯ್ತು ಎಂಬ ಕಾರಣಕ್ಕೆ ಕಾರ್ಯಕ್ರಮ ಸ್ಥಳದಿಂದ ಹೊರಟ್ಟಿದ್ದರು. ಕಾರ್ಯಕ್ರಮದಲ್ಲಿ ಕೆಕೆ ಪದೇ ಪದೇ ಬೆವರು ಒರೆಸಿಕೊಳ್ಳುತ್ತಿರುವ ಮತ್ತು ಕಾರ್ಯಕ್ರಮದಿಂದ ಹೋಟೆಲ್ಗೆ ವಾಪಸ್ ಆಗುತ್ತಿರುವ ವೀಡಿಯೋ ಲಭ್ಯ ಆಗಿದೆ.
53 ವರ್ಷದ ಕೆಕೆ ಹಿಂದಿ, ತಮಿಳು, ತೆಲುಗು, ಕನ್ನಡ, ಮರಾಠ ಮಲಯಾಳಂ, ಬೆಂಗಾಲಿ, ಅಸ್ಸಾಮೀಸ್ ಮತ್ತು ಗುಜರಾತಿ ಭಾಷೆಯಲ್ಲಿ ಹಾಡಿದ್ದಾರೆ.