ಸಿದ್ದರಾಮಯ್ಯ ಪ್ರಮಾಣವಚನಕ್ಕೆ ಸಾಕ್ಷಿಯಾಗಲಿರುವ ಹೊರ ರಾಜ್ಯಗಳ ಗಣ್ಯರ ಪಟ್ಟಿ

ಕರ್ನಾಟಕದ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಸಿದ್ದರಾಮಯ್ಯ ಅವರು ಶನಿವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಪ್ರಮಾಣವಚನಕ್ಕೆ ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್​ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಸಾಕ್ಷಿಯಾಗಲಿದ್ದಾರೆ.

ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಮಧ್ಯಾಹ್ನ 12.30ಕ್ಕೆ ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಕಾಂಗ್ರೆಸ್​ ಅನ್ಯ ರಾಜ್ಯಗಳ ನಾಯಕರಿಗೂ ಆಹ್ವಾನ ನೀಡಿದೆ.

ಸಿದ್ದರಾಮಯ್ಯ ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿ ಆಗಲಿರುವ ಅನ್ಯ ರಾಜ್ಯಗಳ ನಾಯಕರು:

ಎಂ ಕೆ ಸ್ಟಾಲಿನ್​ – ತಮಿಳುನಾಡು ಮುಖ್ಯಮಂತ್ರಿ

ಮಮತಾ ಬ್ಯಾನರ್ಜಿ – ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ನಿತೀಶ್​ ಕುಮಾರ್​ – ಬಿಹಾರ ಮುಖ್ಯಮಂತ್ರಿ

ಕೆ ಸಿ ಚಂದ್ರಶೇಖರ್​ ರಾವ್​ – ತೆಲಂಗಾಣ ಮುಖ್ಯಮಂತ್ರಿ

ಉದ್ಧವ್​ ಠಾಕ್ರೆ – ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ

ಅಖಿಲೇಶ್​ ಸಿಂಗ್​ ಯಾದವ್​ – ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ

ತೇಜಸ್ವಿ ಯಾದವ್​ – ಬಿಹಾರ ಉಪ ಮುಖ್ಯಮಂತ್ರಿ

ಹೇಮಂತ್​ ಸೊರೇನ್​ – ಜಾರ್ಖಂಡ್​ ಮುಖ್ಯಮಂತ್ರಿ

ಫಾರೂಕ್​ ಅಬ್ದುಲ್ಲಾ – ಎನ್​ಸಿಪಿ ಮುಖ್ಯಸ್ಥ

ನವೀನ್​ ಪಟ್ನಾಯಕ್​ – ಒಡಿಶಾ ಮುಖ್ಯಮಂತ್ರಿ

ಶರದ್​ ಪವಾರ್​ – ಎನ್​ಸಿಪಿ ಮುಖ್ಯಸ್ಥ

ಭೂಪೇಂದ್ರ ಸಿಂಗ್​ ಬಘೇಲ್​ – ಛತ್ತೀಸ್​​ಗಢ ಮುಖ್ಯಮಂತ್ರಿ

ಅಶೋಕ್​ ಗೆಹ್ಲೋಟ್​ – ರಾಜಸ್ಥಾನ ಮುಖ್ಯಮಂತ್ರಿ

ಸುಖ್​ವಿಂದರ್​ ಸಿಂಗ್​ ಸುಕು – ಹಿಮಾಚಲ ಪ್ರದೇಶ ಮುಖ್ಯಮಂತ್ರಿ