ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪೂರ್ಣ ಸಂಪುಟ ರಚನೆ ಆದ ಬಳಿಕ ಕರ್ನಾಟಕ ಬಿಜೆಪಿ ಘಟಕ ತನ್ನ ಟ್ವಿಟ್ಟರ್ ಖಾತೆಯಲ್ಲಿ ಆರೋಪವೊಂದನ್ನು ಮಾಡಿದೆ.
ತಾರತಮ್ಯ ಎಂದರೆ ಕಾಂಗ್ರೆಸ್ ಎಂದು ಬರೆದು ಎಂಟು ಜಿಲ್ಲೆಗಳಿಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಪತ್ರಿಕೆಯ ವರದಿಯನ್ನು ಅಂಟಿಸಿದೆ.
ಹಾಗಾದರೆ ಈ ಬಾರಿ ಸಿದ್ದರಾಮಯ್ಯ ಸರ್ಕಾರಕ್ಕೂ 2019ರ ಜುಲೈನಿಂದ 4 ವರ್ಷ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರವೂ ಜಾತಿ ಮತ್ತು ಪ್ರಾದೇಶಿಕ ಪ್ರಾತಿನಿಧ್ಯತೆಯಲ್ಲಿರುವ ವ್ಯತ್ಯಾಸ ಏನು ಎಂಬ ಮಾಹಿತಿ ಇಲ್ಲಿದೆ.
ಸಿದ್ದರಾಮಯ್ಯ ಅವರ ಈಗಿನ ಸರ್ಕಾರದಲ್ಲಿ ಸಚಿವ ಸ್ಥಾನ ಇಲ್ಲವಾಗಿರುವ ಜಿಲ್ಲೆಗಳು 9.
ಕೋಲಾರ, ಕೊಡಗು, ಚಿಕ್ಕಮಗಳೂರು, ಹಾವೇರಿ, ಉಡುಪಿ, ದಕ್ಷಿಣ ಕನ್ನಡ, ಹಾಸನ, ಚಾಮರಾಜನಗರ, ವಿಜಯನಗರ
2019ರಿಂದ 2021ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಸಚಿವ ಸ್ಥಾನ ಸಿಗದ ಜಿಲ್ಲೆಗಳು: 13
ವಿಜಯಪುರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಕಲ್ಬುರ್ಗಿ, ಹಾಸನ, ಕೊಡಗು, ಕೋಲಾರ, ಮೈಸೂರು, ರಾಯಚೂರು, ರಾಮನಗರ, ಯಾದಗಿರಿ, ಬೆಂಗಳೂರು ಗ್ರಾಮಾಂತರ
2021ರಿಂದ ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ಸಚಿವ ಸ್ಥಾನ ಇಲ್ಲದ ಜಿಲ್ಲೆಗಳು: 13
ವಿಜಯಪುರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಕಲ್ಬುರ್ಗಿ, ಹಾಸನ, ಕೊಡಗು, ಕೋಲಾರ, ರಾಯಚೂರು, ಮೈಸೂರು, ರಾಯಚೂರು, ರಾಮನಗರ, ಯಾದಗಿರಿ, ಬಳ್ಳಾರಿ
ಅಂದರೆ ನಾಲ್ಕು ವರ್ಷಗಳ ಅವಧಿಯಲ್ಲಿಈ ಇಬ್ಬರು ಮುಖ್ಯಮಂತ್ರಿಗಳ ಅವಧಿಯಲ್ಲೂ 13 ಜಿಲ್ಲೆಗಳು ಸಚಿವ ಸ್ಥಾನದಿಂದ ವಂಚಿತವಾದವು. ರಾಮನಗರ ಮತ್ತು ಕೋಲಾರ ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದ ಜಿಲ್ಲೆಗಳಲ್ಲಿ ಹಿರಿಯ ಬಿಜೆಪಿ ಶಾಸಕರಿದ್ದರೂ ಪ್ರಾತಿನಿಧ್ಯ ಸಿಗಲಿಲ್ಲ.
ಜಾತಿವಾರು ಲೆಕ್ಕಾಚಾರ:
ಈಗಿನ ಸಿದ್ದರಾಮಯ್ಯನವರ ಸಂಪುಟದಲ್ಲಿ ಇರುವ ಸಚಿವರ ಜಾತಿವಾರು ಲೆಕ್ಕಾಚಾರ: 13 ಸಮುದಾಯಗಳಿಗೆ ಮಣೆ
ಲಿಂಗಾಯತ-8, ಒಕ್ಕಲಿಗ-5, ಎಸ್ಸಿ-06, ಎಸ್ಟಿ-3, ಕುರುಬ-2, ಮುಸಲ್ಮಾನ-2, ಬ್ರಾಹ್ಮಣ-01, ಕ್ರಿಶ್ಚಿಯನ್ -01, ಕ್ಷತ್ರಿಯ – 01, ಮರಾಠ-02, ಈಡಿಗ ಅಥವಾ ಬಿಲ್ಲವ – 01, ಮೊಗವೀರ -01, ಜೈನ್ -01
ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿದ್ದ ಸಚಿವರ ಜಾತಿವಾರು ಪ್ರಾತಿನಿಧ್ಯ: 9 ಸಮುದಾಯಗಳಿಗೆ ಮಣೆ
ಲಿಂಗಾಯತ-10, ಒಕ್ಕಲಿಗ-07, ಎಸ್ಸಿ-03, ಎಸ್ಟಿ-01, ಬ್ರಾಹ್ಮಣ-02, ಬಿಲ್ಲವ-02, ನಾಯ್ಡು-01, ರಜಪೂತ-01, ಕುರುಬ-03
ADVERTISEMENT
ADVERTISEMENT