ಸುಳ್ಳು ಜಾಹೀರಾತು ಹೊಟ್ಟೆ ತುಂಬಿಸುತ್ತಾ..? – ಸಿದ್ದರಾಮಯ್ಯ ಪ್ರಶ್ನೆ

SIDDARAMAIAH
SIDDARAMAIAH

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಹಣಕಾಸು ಸಚಿವರಾಗಿ ಅತೀ ಹೆಚ್ಚು ಬಾರಿ ಬಜೆಟ್‌ ಮಂಡಿಸಿರುವ ಹೆಗ್ಗಳಿಕೆ ಹೊಂದಿರುವ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಬರಬೇಕಿದ್ದ 5,600 ಕೋಟಿ ರೂಪಾಯಿ ಪಾಲು ಬಂದಿಲ್ಲ. ಅವರಿಗೆ ಆರ್ಥಿಕ ನಿರ್ವಹಣೆಯ ಜ್ಞಾನವಿಲ್ಲ ಎಂದು ಟಗರು ಕಿಡಿಕಾರಿದ್ದಾರೆ.

ಕೇಂದ್ರದಿಂದ ಬರಬೇಕಿದ್ದ ಜಿಎಸ್‌ಟಿ ಸಂಗ್ರಹಣೆಯ ರಾಜ್ಯದ ಪಾಲು ರೂ.5,600 ಕೋಟಿ ಹಣ ಬಂದಿಲ್ಲ. ಅವರಿಗೆ ಆರ್ಥಿಕ ನಿರ್ವಹಣೆಯ ಜ್ಞಾನವಿಲ್ಲ. ಕುರ್ಚಿ ಮೇಲೆ ಕೂತು ಅಧಿಕಾರ ಉಳಿಸಿಕೊಳ್ಳಲು ಭಜನೆ ಮಾಡುವ ಬದಲು, ಕೇಂದ್ರದ ಬಳಿ ಗಟ್ಟಿ ಮಾತನಾಡಿದರೆ ಸರ್ಕಾರಿ ನೌಕರರಿಗೆ ಸಂಬಳವೂ ಸಿಗುತ್ತೆ, ನೆರೆ ಪರಿಹಾರದ ಹಣವೂ ಬರುತ್ತೆ.

ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯವ್ರೇ ಒಂದೊಂದು ರಾಜ್ಯದಲ್ಲಿ ಕಣ್ಮರೆ:

ಮಹಾರಾಷ್ಟ್ರ, ಹರಿಯಾಣದ ಚುನಾವಣಾ ಫಲಿತಾಂಶವನ್ನು ಮರೆತು ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪ ಭ್ರಮೆಯಲ್ಲಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಮಾಡ್ತೀನಿ‌ ಅಂದವರೆಲ್ಲ ಅವರೇ ನಿಧಾನವಾಗಿ ಒಂದೊಂದೆ ರಾಜ್ಯಗಳಲ್ಲಿ ಕಣ್ಮರೆಯಾಗುತ್ತಿದ್ದಾರೆ. ದೇಶದ ಜನಕ್ಕೆ ಯಾರು ತಮ್ಮ ಹಿತ ಕಾಯುವವರು ಎಂದು ಕ್ರಮೇಣ ಅರ್ಥವಾಗುತ್ತಿದೆ

ಸುಳ್ಳು ಜಾಹೀರಾತು ಹೊಟ್ಟೆ ತುಂಬಿಸುತ್ತಾ..?

ಹೊಸಕೋಟೆಯನ್ನು ಮಾದರಿ ತಾಲೂಕು ಮಾಡ್ತೀನಿ ಎಂದು ಹೇಳುವ ಮುಖ್ಯಮಂತ್ರಿ ಅವರಿಗೆ, ಪ್ರವಾಹದಲ್ಲಿ ಆಸ್ತಿಪಾಸ್ತಿ ಕಳೆದುಕೊಂಡು ಬೀದಿಯಲ್ಲಿ ಬದುಕು ಸಾಗಿಸುತ್ತಿರುವ ಜನ ಮರೆತುಹೋಗಿದ್ದಾರೆ. ಅವರ ಬದುಕು ಸರಿ ಮಾಡೋದು ಯಾವಾಗ? ಹುಸಿ ಭರವಸೆ, ಸುಳ್ಳು ಜಾಹಿರಾತು ಜನರ ಹೊಟ್ಟೆ ತುಂಬಿಸುತ್ತಾ? 

ಎಂದು ವಿರೋಧ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

LEAVE A REPLY

Please enter your comment!
Please enter your name here