ನಿಜ ನಾವು ಮಾಡಿಸಿದ್ದು ನಿಜ..! – ಸಿದ್ದರಾಮಯ್ಯ ಹೇಳಿದ್ದೇನು..?

ಹುಣಸೂರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರದ ಪರಿ

ಅನರ್ಹ ಶಾಸಕರನ್ನು ಅನರ್ಹರು ಎಂದು ಸುಪ್ರೀಂಕೋರ್ಟೆ ಹೇಳಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ತೀವ್ರಗೊಳಿಸಿದ್ದಾರೆ. ಹುಣಸೂರಲ್ಲಿ ತಮ್ಮ ಅಭ್ಯರ್ಥಿ ಮಂಜುನಾಥ್‌ ಪರ ಅಬ್ಬರದ ಪ್ರಚಾರ ಕೈಗೊಂಡ ವೇಳೆ ಮತ್ತೆ ಅಧಿಕಾರಕ್ಕೆ ಬಂದರೆ ೧೦ ಕೆಜಿ ಅಕ್ಕಿ ನೀಡುವ ಭರವಸೆ ನೀಡಿದರು.

ಹುಣಸೂರಲ್ಲಿ ಮುನಿಸಿಕೊಂಡಿರುವ ಜೆಡಿಎಸ್‌ ನಾಯಕ ಮಾಜಿ ಸಚಿವ ಜಿಟಿ ದೇವೇಗೌಡರ ಬೆಂಬಲ ಕೋರುವ ಬಗ್ಗೆ ಮಾತಾಡುವುದಾಗಿ ಹೇಳಿದರು.

ಎಂಟಿಬಿ ನಾಗರಾಜ್‌ ಬಳಿ ನಾನ್ಯಾಕೆ ಸಾಲ ಪಡೆಯಲಿ ಎಂದು ಎಂಟಿಬಿ ನಾಗರಾಜ್‌ಗೆ ತಿರುಗೇಟು ಕೊಟ್ಟ ಟಗರು, ಕುರುಬ ಸಮುದಾಯದ ಸ್ವಾಮೀಜಿ ವಿರುದ್ಧ ಮಾತಾಡಿದ ಸಚಿವ ಮಾಧುಸ್ವಾಮಿಗೆ ಸಂಸ್ಕೃತಿ ಇಲ್ಲ ಎಂದು ಟೀಕಿಸಿದರು.

LEAVE A REPLY

Please enter your comment!
Please enter your name here