‘ಶುಭಮಂಗಳ’ ಸಿನಿಮಾದ ಟ್ರೇಲರ್ ಔಟ್ : ಅಕ್ಟೋಬರ್ 14ಕ್ಕೆ ಚಿತ್ರ ರಿಲೀಸ್

Subhamangala Film

ಸ್ಯಾಂಡಲ್ವುಡ್ನಲ್ಲಿ ಸೂಪರ್ಹಿಟ್ ಸಿನಿಮಾಗಳ ಟೈಟಲ್ ಮರುಬಳಕೆ ಆಗೋದು ಹೊಸತೆನಲ್ಲ. ಈಗ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಶುಭಮಂಗಳ’ ಚಿತ್ರದ (Subhamangala Film) ಟೈಟಲ್ ಇಟ್ಟುಕೊಂಡು ಬಂದಿರುವ ಹೊಸ ಚಿತ್ರ ಶುಭಮಂಗಳ ರಿಲೀಸ್ ಗೆ ಸಜ್ಜಾಗಿದೆ. ಸಖತ್ ಮಜವಾಗಿರುವ ಟೀಸರ್ ಝಲಕ್ ಬಿಡುಗಡೆ ಮಾಡಿ ಕುತೂಹಲ ಹೆಚ್ಚಿಸಿದ್ದ ಚಿತ್ರತಂಡ ಈಗ ಟ್ರೇಲರ್ ಅನಾವರಣ ಮಾಡಿದೆ. ಇತ್ತೀಚೆಗಷ್ಟೇ ರೇಣುಕಾಂಬ ಸ್ಟುಡಿಯೋದಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನೆರವೇರಿದ್ದು, ಇಡೀ ಚಿತ್ರತಂಡ ಈ ಕಾರ್ಯಕ್ರಮಕ್ಕೆ ಭಾಗಿಯಾಗಿ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ನಿರ್ದೇಶಕ ಸಂತೋಷ್ ಗೋಪಾಲ್ ಮಾತನಾಡಿ, ಮದುವೆ ಮನೆಯಲ್ಲಿ ನಡೆಯುವ ಕಥೆ ಇದು. ಮದುವೆ ಮನೆಗೆ ಹೋದರೆ ಅಲ್ಲಿ ಎಮೋಷನ್, ಡ್ರಾಮಾ, ತುಂಬಾ ಕಥೆಗಳು ನಡೆಯುತ್ತಲೆ ಇರುತ್ತದೆ. ಆ ಕಥೆಗಳಲ್ಲಿ ಐದು ಚ್ಯುಸ್ ಮಾಡಿ ಸಿನಿಮಾ ಮಾಡಿದ್ದೇನೆ. ಈ ಚಿತ್ರದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಇಬ್ಬರಿಗೂ ಹೆಚ್ಚಿನ ಪ್ರಾಮುಖ್ಯತೆ ಇದೆ. ಅಕ್ಟೋಬರ್ 14ಕ್ಕೆ ಸಿನಿಮಾ (Subhamangala Film) ರಿಲೀಸ್ ಮಾಡುತ್ತಿದ್ದೇವೆ. ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಭಾವಿಸಿದ್ದೇವೆ. ದಯವಿಟ್ಟು ಬೆಂಬಲ ಕೊಡಿ ಎಂದರು.

Subhamangala Film

ಸಾಕಷ್ಟು ಕಿರುಚಿತ್ರಗಳನ್ನು ನಿರ್ಮಿಸಿರುವ ಸಂತೋಷ್ ಗೋಪಾಲ್ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದು, ಮದುವೆ ಮನೆಯಲ್ಲಿ ನಡೆಯುವ ಕಾಮಿಡಿ, ಲವ್, ಸೆಂಟಿಮೆಂಟ್ ಎಳೆಯನ್ನು ಇಟ್ಟುಕೊಂಡು ಸಿನಿಮಾ ರೂಪಿಸಿದ್ದಾರೆ. ಮೇಘನಾ ಗಾಂವ್ಕರ್, ಹಿತಾ ಚಂದ್ರಶೇಖರ್, ರಾಕೇಶ್ ಮಯ್ಯ, ಅದಿತಿ ರಾಮ್, ದೀಪ್ತಿ ನಾಗೇಂದ್ರ, ಅರುಣ್ ಬಲಾಜಿ ಮುಂತಾದವರು ನಟಿಸಿದ್ದು, ಜೂಡಾ ಸ್ಯಾಂಡಿ ಸಂಗೀತ, ರಾಕೇಶ್ ಬಿ ರಾಜ್ ಕ್ಯಾಮೆರಾ, ಸಂತೋಷ್ ನಿರ್ದೇಶನದ ಜೊತೆಗೆ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಅವ್ಯಕ್ತ ಫಿಲ್ಮಂಸ್ ನಡಿ ಸಂತೋಷ್ ಸ್ನೇಹಿತರ ಜೊತೆಗೂಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮದುವೆಗೆ ಮನೆಗೆ ತೆರಳಿ ವಿಭಿನ್ನವಾಗಿ ಪ್ರಮೋಷನ್ ನಡೆಸ್ತಿರುವ ಚಿತ್ರತಂಡ ಬರುವ ಅಕ್ಟೋಬರ್ 14ಕ್ಕೆ ಚಿತ್ರವನ್ನು ತೆರೆಗೆ ತರಲಿದೆ. ಇದನ್ನೂ ಓದಿ : Hoysala : ಡಾಲಿ ಧನಂಜಯ್​ ನಟನೆಯ 25 ನೇ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

LEAVE A REPLY

Please enter your comment!
Please enter your name here