2 ನೇ ಪ್ರೀತಿಯ ಗುಟ್ಟು ರಟ್ಟು ಮಾಡಿದ ನಟಿ ಶ್ರುತಿ ಹಾಸನ್- ಮೊದಲು ಪ್ರಪೋಸ್ ಮಾಡಿದ್ದು ಯಾರು ಗೊತ್ತಾ..?

ನಟ ಕಮಲ ಹಾಸನ್ ಅವರ ಮಗಳು ಹಾಗೂ ಖ್ಯಾತ ನಟಿಯಾಗಿ ಗುರುತಿಸಿಕೊಂಡಿರುವ ನಟಿ ಶೃತಿ ಹಾಸನ್ ತಮ್ಮ 2 ನೇ ಪ್ರೀತಿಯ ಗುಟ್ಟನ್ನು ರಟ್ಟು ಮಾಡಿದ್ದರೆ.

ಖ್ಯಾತ ನಟ ಕಮಲ್ ಹಾಸನ್ ಅವರ ಮಗಳಾಗಿ ತಂದೆಯ ಹೆಸರನ್ನೇ ಮುಂದಿಟ್ಟುಕೊAಡು ಬೆಳೆಯಲು ಇಚ್ಚಿಸಿದ ಶೃತಿ ಹಾಸನ್ ತಮ್ಮದೇ ಛಾಪು ಮೂಡಿಸಿ ಚಿತ್ರರಂಗದಲ್ಲಿ ಬೆಳೆದು ಬಂದಿದ್ದಾರೆ. ಇದೀಗ ನಟಿ ತಮ್ಮ 2 ನೇ ಪ್ರೀತಿಯ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ನಟಿ ಶೃತಿ ಹಾಸನ್ ಶಂತನು ಹಜಾರಿಕ ಅವರ ಜೊತೆಗೆ ಸುತ್ತಾಡುತ್ತಿರುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಬಹು ಚರ್ಚೆಯಾಗಿತ್ತು. ಇದೀಗ ನಟಿ ಶೃತಿ ಹಾಸನ್ ಅವರೇ ಈ ಚರ್ಚೆಗೆ ತಿಲಾಂಜಲಿ ನೀಡಿದ್ದು, ತಾವು ಶಂತನು ಹಜಾರಿಕ ಅವರ ಜೊತೆಗೆ ಪ್ರೀತಿಯಲ್ಲಿರುವುದನ್ನು ಖಚಿಪಡಿಸಿದ್ದಾರೆ. ಈ ಬಗ್ಗೆ ಹಲವು ವೇದಿಕೆಗಳಲ್ಲಿ ಸೂಕ್ಷö್ಮವಾಗಿ ಹಂಚಿಕೊAಡಿದ್ದ ನಟಿ ಇದೀಗ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಗೆಳೆಯ ಶಂತನು ಜೊತೆ ವೀಡಿಯೋ ಹರಿಬಿಟ್ಟು ತಮ್ಮ ಪ್ರೀತಿಯ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ.

ಈ ವೀಡಿಯೋದಲ್ಲಿ ಮೊದಲು ಪ್ರೀತಿಸಿದ್ದು ಯಾರು, ಮೊದಲು ಈ ಲವ್ ಯೂ ಹೇಳಿದ್ದು ಯಾರು..? ಹೆಚ್ಚು ಹಣ ಖರ್ಚು ಮಡುವವರು ಯಾರು ಎನ್ನುವ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದೆ. ಈ ಪ್ರಶ್ನೆಗಳಿಗೆ ಶೃತಿ ಹಾಸನ್ ಹಾಗೂ ಶಂತನು ಜೋಡಿ ಉತ್ತರಿಸಿದೆ.

 

View this post on Instagram

 

A post shared by Shruti Haasan (@shrutzhaasan)

ಶಂತನು ಹಜಾರಿಕ ಅವರು ನಟಿ ಶೃತಿ ಹಾಸನ್ ಅವರನ್ನು ಮೊದಲು ಪ್ರೀತಿಸಿದ್ದಾರಂತೆ. ಆದರೆ, ಶೃತಿ ಹಾಸನ್ ಮೊದಲ ಬಾರಿಗೆ ಗೆಳೆಯ ಶಂತನು ಹಜಾರಿಕ ಅವರಿಗೆ ಈ ಲವ್ ಯೂ ಹೇಳಿದ್ದಾರೆ.

ಇದಕ್ಕೂ ಮೊದಲು ನಟಿ ಶ್ರುತಿ ಹಾಸನ್ ಲಂಡನ್ ಮೂಲದ ಬಾಯ್ ಫ್ರೆಂಡ್ ಹೊಂದಿದ್ದರು. ಮೈಕಲ್ ಕೋರ್ಸಲ್ ಜೊತೆಗೆ ಹಲವು ವರ್ಷಗಳು ಶೃತಿ ಬಾಂಧವ್ಯ ಹೊಂದಿದ್ದರು. ಅವರ ಜೊತೆಯಲ್ಲಿ ಶ್ರುತಿ ಲಂಡನ್‌ನಲ್ಲೇ ವಾಸವಿದ್ದರು. ಅವರ ಜೊತೆಯಾದ ಮೇಲೆ ಶ್ರುತಿ ಹಾಸನ್ ಚಿತ್ರಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದರು. ಇನ್ನೇನು ಶ್ರು ತಿ ಮತ್ತೆ ಚಿತ್ರ ರಂಗಕ್ಕೆ ಬರುದೇ ಇಲ್ಲ ಎನ್ನುವಾಗ, ಮೈಕಲ್ ಜೊತೆಗೆ ಶ್ರುತಿ ಬ್ರೇಕಪ್ ಆಗಿತ್ತು.

LEAVE A REPLY

Please enter your comment!
Please enter your name here