ನಟ ಅಜಯ್ ರಾವ್ ಅವರ ಬಹುನಿರೀಕ್ಷಿತ ಚಿತ್ರ ಶೋಕಿವಾಲಾ ಚಿತ್ರದ ಟೈಟಲ್ ಸಾಂಗ್ನ್ನು ಮಂಡ್ಯದ ಸೊಸೆ ಸಮಲತಾ ಅವರು ನಾಳೆ ಬುಧವಾರ ಬಿಡುಗಡೆ ಮಾಡಲಿದ್ದಾರೆ.
ಈಗಾಗಲೇ ಶೋಕಿವಾಲಾ ಚಿತ್ರದ ಟಟೀಸರ್ ಹಾಗೂ ಹಾಡುಗಳು ಪ್ರೇಕ್ಷಕರ ಮನಸೂರೆಗೊಂಡಿವೆ. ಈ ಚಿತ್ರದ ಟೈಟಲ್ ಹಾಡಿನಲ್ಲಿ ನಾಯಕ ನಟ ಅಂಬರೀಷ್ ಅವರ ಅಭಿಮಾನಿಯಾಗಿರುವುದರಿಂದ ಸುಮಲತಾ ಅವರಿಂದ ಈ ಸಾಂಗ್ ಬಿಡುಗಡೆ ಮಾಡಿಸಲಾಗುತ್ತಿದೆ ಎಂದು ನಿರ್ದೇಶಕ ಜಾಕಿ ತಿಳಿಸಿದ್ದಾರೆ.
ನಾಳೆ ಬುಧವಾರ ದಿ. 27 ರಂದು ಮಧ್ಯಾಹ್ನ 2 ಗಂಟೆಗೆ ಕ್ರಿಸ್ಟಲ್ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಟೈಟಲ್ ಸಾಂಗ್ ರಿಲೀಸ್ ಮಾಡಲಾಗುತ್ತಿದೆ.
ಶೋಕಿವಾಲಾ ಪಕ್ಕ ಹಳ್ಳಿ ಸೊಗಡಿನ ಫ್ಯಾಮಿಲಿ ಮೂವಿಯಾಗಿದ್ದು, ನಿಮ್ಮನ್ನು ನಕ್ಕು ನಗಿಸುವಲ್ಲಿ ಯಶಸ್ವಿಯಾಗುತ್ತದೆ. ಈ ವಾರ ಚಿತ್ರ ತರೆಗೆ ಬರುತ್ತಿದ್ದು. ತುಂಬಾ ಖುಷಿಯಲ್ಲಿದ್ದೆನೆ ಎಂದು ನಿರ್ದೇಶಕರ ಹೇಳಿದ್ದಾರೆ.
ನಿರ್ಮಾಪಕ T.R.ಚಂದ್ರಶೇಖರ್ ಅವರು ಚಿತ್ರ ಸೊಗಸಾಗಿ ಮೂಡಿ ಬಂದಿದೆ. ಪಕ್ಕಾ ಹಳ್ಳಿಯ ಈ ಚಿತ್ರಕ್ಕೆ ಪ್ರೇಕ್ಷಕರು ಆಶೀರ್ವದಿಸಬೇಕು ಎಂದರು.
ಇದೇ ಶುಕ್ರವಾರ 29 ರಂದು ನಟ ಅಜಯ್ ರಾವ್ ನಟನೆಯ ಶೋಕಿವಾಲಾ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ADVERTISEMENT
ADVERTISEMENT