ಬಹುಭಾಷ ನಟಿ ಮೀನಾ ಪತಿ ವಿದ್ಯಾಸಾಗರ್ ಅಕಾಲಿಕ ನಿಧನ ಹೊಂದಿದ್ದಾರೆ. ಕಳೆದ ಕೆಲ ದಿನಗಳಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಚೆನ್ನೈನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ. ವಿದ್ಯಾಸಾಗರ್ ಅವರಿಗೆ 48 ವರ್ಷ ವಯಸ್ಸಾಗಿತ್ತು.
ಕೊರೋನಾ ಕಾಲದಲ್ಲಿ ನಟಿ ಮೀನಾ ಅವರ ಇಡೀ ಕುಟುಂಬ ಸೊಂಕಿಗೆ ಒಳಗಾಗಿತ್ತು. ವಿದ್ಯಾಸಾಗರ್ ಅವರಿಗೂ ಸೋಂಕು ತಗುಲಿತ್ತು. ಬಳಿಕ ವಿದ್ಯಾಸಾಗರ್ ಅವರ ಶ್ವಾಸಕೋಶ ಸಮಸ್ಯೆ ಇನ್ನಷ್ಟು ತೀವ್ರವಾಗಿತ್ತು.
2009ರಲ್ಲಿ ನಟಿ ಮೀನಾ ಅವರಿಗೆ ಬೆಂಗಳೂರು ಮೂಲದ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ವಿದ್ಯಾಸಾಗರ್ ಜೊತೆ ಮದುವೆ ಆಗಿತ್ತು. ಈ ದಂಪತಿಗೆ ನೈನಿಕಾ ಎಂಬ ಪುತ್ರಿ ಇದ್ದಾರೆ.