ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮಹಿಳೆಯರಿಗಾಗಿ ಮಧ್ಯಪ್ರದೇಶದಲ್ಲಿ ಸಿಎಂ ಶಿವರಾಜ್ ಸಿಂಗ್ ಚವ್ಹಾಣ್ ನೇತೃತ್ವದ ಸರ್ಕಾರ ಜಾರಿ ಮಾಡಿರುವ ಸಾಮೂಹಿಕ ವಿವಾಹ ಯೋಜನೆ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿದೆ.
ಈ ಹಿಂದೆ ವಿವಾಹಕ್ಕೆ ಮೊದಲು ಕೆಲ ವಧುಗಳಿಗೆ ಪ್ರಗ್ನೆನ್ಸಿ ಟೆಸ್ಟ್ ಮಾಡಿದ ಆರೋಪ ಕೇಳಿಬಂದಿತ್ತು. ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಇದೀಗ ಮದುವೆಯಲ್ಲಿ ವಧುಗಳಿಗೆ ನೀಡಲಾದ ಮೇಕಪ್ ಕಿಟ್‌ಗಳಲ್ಲಿ ಕಾಂಡೋಮ್ಸ್ ಮತ್ತು ಗರ್ಭ ನಿರೋಧಕ ಮಾತ್ರೆಗಳನ್ನು ನೀಡಿರುವ ಪ್ರಕರಣ ಝಬುವಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಮುಖ್ಯಮಂತ್ರಿ ಕನ್ಯಾ ವಿವಾಹ್/ನಿಖಾ ಯೋಜನೆಯಡಿ ಸೋಮವಾರ ಸಾಮೂಹಿಕ ವಿವಾಹವನ್ನು ಝಬುವಾದಲ್ಲಿ ಏರ್ಪಡಿಸಲಾಗಿತ್ತು. 296 ಜೋಡಿಗಳು ಹಸೆಮಣೆ ಏರಿದವು. ಈ ಸಂದರ್ಭದಲ್ಲಿ ಸರ್ಕಾರ ಕೊಟ್ಟ ಮೇಕಪ್ ಕಿಟ್‌ಗಳಲ್ಲಿ ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳನ್ನು ನೀಡಲಾಗಿದೆ.
ಇದನ್ನು ತೆರೆದು ನೋಡಿದ ವಧುಗಳು ಶಾಕ್ ಆಗಿದ್ದಾರೆ. ಈ ವಿಚಾರವನ್ನು ಪ್ರಸ್ತಾಪಿಸಿ ವಿರೋಧ ಪಕ್ಷಗಳು ಮತ್ತೊಮ್ಮೆ ಸಿಎಂ ಚೌಹಾಣ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆದರೆ, ತಮಗೂ ಇದಕ್ಕೂ ಯಾವುದೆ ಸಂಬಂಧ.. ಆಹಾರ ಇಲಾಖೆ ಜಾಗೃತಿ ಮೂಡಿಸಲು ಕೊಟ್ಟಿರಬಹುದು ಎಂದು ಡಿಸಿ ಭರ‍್ಸಿಂಗ್ ರಾವತ್ ತಿಳಿಸಿದ್ದಾರೆ. ತಮಗೆ ಫಲಾನುಭವಿ ಖಾತೆಗೆ 49,000 ರೂ. ಮತ್ತು ಮದುವೆ ಸಮಯದಲ್ಲಿ ಆಹಾರ, ನೀರು, ಟೆಂಟ್ ಖರ್ಚಿಗೆ 6ಸಾವಿರ ನೀಡಿದ್ದೇವೆ. ಆರೋಗ್ಯ ಇಲಾಖೆ ನೀಡಿದ ಕಿಟ್‌ನಲ್ಲಿ ಏನಿದೆ ಎಂಬುದು ನಮಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.