Shocking ಧೋನಿ ಖ್ಯಾತಿಯ ನಟ ಸುಶಾಂತ್ ಸಿಂಗ್ ರಾಜಪುತ್ ಆತ್ಮಹತ್ಯೆ

ಬಾಲಿವುಡ್ ನ ಉದಯೋನ್ಮುಖ ನಟ, 34 ವರ್ಷ ಸುಶಾಂತ್ ಸಿಂಗ್ ರಾಜಪುತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮುಂಬೈನ ತಮ್ಮ‌ ನಿವಾಸದಲ್ಲಿ ಇಂದು ಮುಂಜಾನೆ ನೇಣಿಗೆ ಶರಣಾಗಿದ್ದು, ಇಂದು ಮಧ್ಯಾಹ್ನ ಬೆಳಕಿಗೆ ಬಂದಿದೆ. ಕಳೆದ ಆರು ತಿಂಗಳಿಂದ ಸುಶಾಂತ್ ಸಿಂಗ್ ರಾಜಪುತ್ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೋಲಿಸರು ತನಿಖೆ ನಡೆಸಿದ್ದಾರೆ.

ಸುಶಾಂತ್ ಸಿಂಗ್ ರಾಜಪುತ್ ಆತ್ಮಹತ್ಯೆಯಿಂದ ಇಡೀ ಬಾಲಿವುಡ್ ಶಾಕ್ ಗೆ ಒಳಗಾಗಿದ್ದು, ಕಂಬನಿ ಮಿಡಿದಿದೆ.

ಕೈಪೋಚೆ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದ ಸುಶಾಂತ್ ಸಿಂಗ್ ರಾಜಪುತ್ ಧೋನಿ; ದಿ ಅನ್ ಟೊಲ್ಡ್ ಸ್ಟೋರಿ ಸಿನಿಮಾ ಮೂಲಕ ಖ್ಯಾತಿ ಸಂಪಾದಿಸಿದ್ದರು.

ಇತ್ತೀಚಿಗಷ್ಟೆ ಜೂನ್ 8ರಂದು ಸುಶಾಂತ್ ಸಿಂಗ್ ರಾಜಪುತ್ ಪರ್ಸನಲ್ ಸೆಕ್ರೆಟರಿ ದಿಶಾ ಸಾಲಿಯನ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನುವುದು ಗಮನಿಸಬೇಕಾದ ವಿಚಾರ.

LEAVE A REPLY

Please enter your comment!
Please enter your name here