ನಟಿ ಶೃತಿ ಹಾಗೂ ಪ್ರಮೀಳಾ ನಾಯ್ಡುಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ.
ಶೃತಿ ಹಾಗೂ ಪ್ರಮೀಲಾ ನಾಯ್ಡು ಅವರನ್ನು ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನದಿಂದ ರದ್ದುಗೊಳಿಸಿ ಸಿಎಂ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.
ನಟಿ ಶೃತಿಯವರು ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾಗಿದ್ದರು ಹಾಗೂ ಪ್ರಮೀಳಾ ನಾಯ್ಡು ಅವರು ಮಹಿಳಾ ಆಯೋಗದ ಅಧ್ಯಕ್ಷರಾಗಿದ್ದರು.
ಈ ಎರಡೂ ಮಂಡಳಿಗಳಿಗೆ ಇಂದೇ ನೂತನ ಅಧ್ಯಕ್ಷರನ್ನು ನೇಮಕ ಮಾಡುವ ಸಾಧ್ಯತೆಯಿದೆ.