ಬಹುನಿರೀಕ್ಷಿತ ಶಿವಾನಂದ ಉಕ್ಕಿನ ಮೇಲ್ಸೇತುವೆ ( Shivananda Steel Bridge ) ಯೋಜನೆ ಶೀಘ್ರವೇ ಪೂರ್ಣಗೊಳ್ಳಲಿದ್ದು, ಆ.30 ರಿಂದ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ ಎಂದು ಬಿಬಿಎಂಪಿ ಮುಖ್ಯ ಇಂಜಿನಿಯರ್ ಲೋಕೇಶ್ ಎಂ ತಿಳಿಸಿದ್ದಾರೆ.
ಸ್ಟೀಲ್ ಬ್ರಿಡ್ಜ್( Shivananda Steel Bridge ) ಯೋಜನೆ ಆ.15 ಕ್ಕೆ ಸಾರ್ವಜನಿಕ ಬಳಕೆಗೆ ಮುಕ್ತವಾಗಬೇಕಿತ್ತು. ರ್ಯಾಂಪ್ ಹಾಗೂ ಕಲ್ವರ್ಟ್ ಕಾಮಗಾರಿಗಳ ಪರಿಣಾಮವಾಗಿ ವಿಳಂಬವಾಗಿತ್ತು. ಆದರೆ ವಾಹನ ದಟ್ಟಣೆ ಕಡಿಮೆ ಮಾಡುವುದಕ್ಕಾಗಿ ಪಾಲಿಕೆ ಮೇಲ್ಸೇತುವೆಯ ಒಂದು ಭಾಗವನ್ನು ಮಾತ್ರ ಸಂಚಾರ ಮುಕ್ತ ಮಾಡಿತ್ತು.
ಕಾಮಗಾರಿಯ ಗುಣಮಟ್ಟದ ಬಗ್ಗೆ ಕೆಲವು ದ್ವಿಚಕ್ರ ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಪಾಲಿಕೆ ಅಧಿಕಾರಿಗಳು, ಕಾಮಗಾರಿ ಪೂರ್ಣಗೊಂಡ ಬಳಿಕ ಯಾವುದೇ ಸಮಸ್ಯೆಗಳೂ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ ಈ ರಸ್ತೆ 1 ತಿಂಗಳು ಬಂದ್
ಮೇಲ್ಸೇತುವೆ ಮುಕ್ತವಾಗುವುದಕ್ಕೂ ಮುನ್ನ ಅಸಮವಾಗಿರುವ ರಸ್ತೆಗಳನ್ನು ಸಮತಟ್ಟಾಗಿಸಲಾಗುತ್ತದೆ. ಹೊಸ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಯೋಜನೆಯನ್ನು ಕೈಬಿಡುವುದರ ಮೂಲಕ ಬಿಬಿಎಂಪಿ 40 ಕೋಟಿ ರೂಪಾಯಿ ಉಳಿಕೆ ಮಾಡಲಾಗಿದೆ. ಯೋಜನೆಯನ್ನು ಬದಲಾವಣೆ ಮಾಡಿ ಇಂಡಿಯನ್ ರೋಡ್ ಕಾಂಗ್ರೆಸ್ ಗುಣಮಟ್ಟಕ್ಕೆ ಅನುಗುಣವಾಗಿ ತಯಾರಿಸಲಾಗಿತ್ತು ಎಂದು ಲೋಕೇಶ್ ಹೇಳಿದ್ದಾರೆ. ಈ ಯೋಜನೆಯನ್ನು 2017 ರಲ್ಲಿ ಆರಂಭಿಸಲಾಗಿತ್ತು.
( ಲಕ್ಕಿ ಮ್ಯಾನ್ ಚಿತ್ರದ ಸಾಂಗ್ ಬಿಡುಗಡೆ ಕಾರ್ಯಕ್ರಮದಲ್ಲಿ ಅಪ್ಪು ನೆನೆದು ನಟಿ ಸಂಗೀತಾ ಭಾವುಕ)