ಶಿವಮೊಗ್ಗ ಜಿಲ್ಲೆಯ ಇಬ್ಬರು 1 ತಿಂಗಳು ಗಡೀಪಾರು – ಅವರಿಬ್ಬರು ಯಾರು..? ಕಾರಣ ಏನು..?

Shivamogga Town
Shivamogga Town
ಶಿವಮೊಗ್ಗ (Shivamogga) ಜಿಲ್ಲೆಯ ಇಬ್ಬರು ವ್ಯಕ್ತಿಗಳನ್ನು ಒಂದು ತಿಂಗಳ ಮಟ್ಟಿಗೆ ಗಡೀಪಾರು ಮಾಡಿ ಶಿವಮೊಗ್ಗ ಉಪ ವಿಭಾಗೀಯ ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಆಗಸ್ಟ್​ 25ರಿಂದ ಸೆಪ್ಟೆಂಬರ್​ 25ರವರೆಗೆ ಗಡೀಪಾರು ಮಾಡಲಾಗಿದೆ.
ಶಿವಮೊಗ್ಗ ನಗರದ ಆಶ್ರಯ ಬಡಾವಣೆಯ 28 ವರ್ಷದ ಶಮಂತ ನಾಯ್ಕ ಮತ್ತು 29 ವರ್ಷದ ಸಂದೀಪ್​ ಕುಮಾರ್​ ಇವರಿಬ್ಬರನ್ನೂ ಗಡೀಪಾರು ಮಾಡಲಾಗಿದೆ.

ಅಂದರೆ ಒಂದು ತಿಂಗಳು ಇವರಿಬ್ಬರು ಶಿವಮೊಗ್ಗ ಉಪ ವಿಭಾಗಧಿಕಾರಿ ವಲಯದೊಳಗೆ ಪ್ರವೇಶ ಮಾಡುವಂತಿಲ್ಲ.
ಗಣೇಶ ಚತುರ್ಥಿ ವೇಳೆ ಸಾರ್ವಜನಿಕವಾಗಿ ಅಶಾಂತಿ ಉಂಟು ಮಾಡಬಹುದು ಎಂಬ ಕಾರಣಕ್ಕೆ ಗಡೀಪಾರು ಮಾಡಲಾಗಿದೆ.
ಇವರ ಮೇಲೆ ಪ್ರಕರಣ ದಾಖಲಾಗಿದ್ದರೂ ಇವರಿಬ್ಬರು ತಮ್ಮ ನಡವಳಿಕೆಯಲ್ಲಿ ಸುಧಾರಿಸಿಕೊಳ್ಳದೇ ಇರುವ ಹಿನ್ನೆಲೆಯಲ್ಲಿ ಗಡೀಪಾರು ಮಾಡಲಾಗಿದೆ.

LEAVE A REPLY

Please enter your comment!
Please enter your name here