ಶಿವಮೊಗ್ಗ ಗ್ರಾಮಾಂತರ: ಮನೆ ಕಳೆದುಕೊಂಡವರಿಗೆ ಕಾಂಗ್ರೆಸ್​ ನಾಯಕಿ ಪಲ್ಲವಿ ಧೈರ್ಯ

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಶಿವಮೊಗ್ಗ ಗ್ರಾಮಾಂತರ (Shivamogga) ಭಾಗದಲ್ಲಿ ಹತ್ತಾರು ಮನೆಗಳು ಕುಸಿದಿದ್ದು ಜಿಲ್ಲಾ ಕಾಂಗ್ರೆಸ್ ವಕ್ತಾರೆ ಜಿ.ಪಲ್ಲವಿ ( G Pallavi) ಮನೆ ಕಳೆದುಕೊಂಡವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ.
ಜೊತೆಗೆ ಸರ್ಕಾರ ಕೂಡಲೇ ಪರಿಹಾರವನ್ನು ಸಂತ್ರಸ್ತರಿಗೆ ವಿತರಣೆ ಮಾಡುವ ಮೂಲಕ ಮನೆ ಕಳೆದುಕೊಂಡವರಿಗೆ ನೆರವಾಗಬೇಕು ಎಂದು ಆಗ್ರಹಿಸಿದ್ದಾರೆ.

ಕೊಮ್ಮನಾಳು ಗ್ರಾಮದಲ್ಲಿ ಯಶೋದಮ್ಮ ಹಾಗೂ ಕಾಂತಿಬಾಯಿ ಎಂಬುವರ ಮನೆ ಕುಸಿದುಬಿದ್ದಿದ್ದು, ಇಲ್ಲಿಗೆ ಭೇಟಿ ನೀಡಿದ ಪಲ್ಲವಿ ಸಂತ್ರಸ್ಥರಿಗೆ ಧೈರ್ಯ ತುಂಬಿದರು. ಅಲ್ಲದೆ ಕೂಡಲೇ ಮನೆ ಕಳೆದುಕೊಂಡವರಿಗೆ ಉಳಿದುಕೊಳ್ಳಲು ಪರ್ಯಾಯ ವ್ಯವಸ್ಥೆ ಮಾಡುವಂತೆ ಪಿಡಿಒಗೆ ತಿಳಿಸಿದ್ದಾರೆ.

ಇದಲ್ಲದೆ ನೆರೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ನೆರೆ ಪರಿಶೀಲನೆ‌ ನಡೆಸಿ ಸರ್ಕಾರ ಕೂಡಲೇ ನೆರೆಯಿಂದ ನಷ್ಟ ಅನುಭವಿಸಿದವರಿಗೆ ಪರಿಹಾರ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here