ಮಹಾರಾಷ್ಟ್ರದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಎನ್ಸಿಪಿ (NCP) ಕಾರ್ಯಾಧ್ಯಕ್ಷರಾಗಿ ಸುಪ್ರಿಯಾ ಸುಳೆ ಮತ್ತು ಪ್ರಫುಲ್ ಪಟೇಲ್ ಅವರನ್ನು ನೇಮಕಗೊಂಡಿದ್ದಾರೆ.
ಕಾರ್ಯಾಧ್ಯಕ್ಷರಾಗಿ ನೇಮಿಸಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಆದೇಶ ಹೊರಡಿಸಿದ್ದಾರೆ.
ಅದರಲ್ಲೂ ಮಹಾರಾಷ್ಟ್ರದ ಉಸ್ತುವಾರಿಯಾಗಿ ಸುಪ್ರಿಯಾ ಸುಳೆ ಅವರನ್ನು ಹೊಣೆಗಾರಿಕೆ ನೀಡಿದ್ದಾರೆ.
ಮಹಾರಾಷ್ಟ್ರ, ಹರಿಯಾಣ ಮತ್ತು ಪಂಜಾಬ್ ಜೊತೆಗೆ ಕೇಂದ್ರ ಚುನಾವಣಾ ಪ್ರಾಧಿಕಾರದ ಮುಖ್ಯಸ್ಥರನ್ನಾಗಿಯೂ ನೇಮಿಸಿದ್ದಾರೆ. ಸುಪ್ರಿಯಾ ಸುಳೆ ಅವರು ಮೂರು ಬಾರಿ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಎನ್ಸಿಪಿ ಮಹಿಳಾ ಮತ್ತು ಯುವ ಮತ್ತು ವಿದ್ಯಾರ್ಥಿ ಘಟಕದ ಉಸ್ತುವಾರಿಯನ್ನೂ ಸುಪ್ರಿಯಾ ಸುಳೆ ಅವರಿಗೆ ನೀಡಲಾಗಿದೆ.
ಈ ಮೂಲಕ ಎನ್ಸಿಪಿಗೆ ತಮ್ಮ ಮಗಳೇ ಮುಂದಿನ ಉತ್ತರಾಧಿಕಾರಿ ಎಂಬ ಸಂದೇಶ ರವಾನಿಸಿದ್ದಾರೆ.
ಪವಾರ್ ಬಳಿಕ ಪಕ್ಷದ ಉತ್ತರಾಧಿಕಾರಿ ಆಗುವ ನಿರೀಕ್ಷೆಯಲ್ಲಿದ್ದ ಮತ್ತು ಬಿಜೆಪಿ ಜೊತೆ ಹೊಂದಾಣಿಕೆಗೆ ಸಿದ್ಧರಾಗಿದ್ದ ಅಣ್ಣನ ಮಗ ಅಜಿತ್ ಪವಾರ್ ಅವರಿಗೆ ಆಘಾತ ನೀಡಿದ್ದಾರೆ.
ಪ್ರಫುಲ್ ಪಟೇಲ್ ಅವರಿಗೆ ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ ಮತ್ತು ಜಾರ್ಖಂಡ್, ಗೋವಾ ಉಸ್ತುವಾರಿ ಜೊತೆಗೆ ಆರ್ಥಿಕ ವ್ಯವಹಾರಗಳ ಸಮಿತಿಯ ಹೊಣೆಗಾರಿಕೆ ನೀಡಲಾಗಿದೆ.
1999ರಲ್ಲಿ ಪಿ ಎ ಸಂಗ್ಮಾ ಅವರ ಜೊತೆಗೆ ಸೇರಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಬಂಡೆದ್ದು ಸ್ಥಾಪಿಸಿದ್ದ ಪವಾರ್ ಅವರು ಸ್ಥಾಪಿಸಿದ್ದ ಎನ್ಸಿಪಿಗೆ ಮುಂದಿನ ವರ್ಷ 25 ವರ್ಷ ಭರ್ತಿಯಾಗಲಿದೆ.
ADVERTISEMENT
ADVERTISEMENT