ಸ್ಪಾದಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ – ಕಾಂಗ್ರೆಸ್ ಮುಖಂಡನ ಬಂಧನ

Manoj Kharjagi

ತನ್ನದೇ ಸ್ಪಾದಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದಡಿ ಕಾಂಗ್ರೆಸ್ ಮುಖಂಡನಿಗೆ ಯುವತಿ ಸ್ನೇಹಿತರು ಥಳಿಸಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡದ ಕಾಂಗ್ರೆಸ್ ಮುಖಂಡ ಮನೋಜ್‍ ಕರ್ಜಗಿ(Manoj Karjagi) ಎಂಬಾತ ಸಿದ್ದರಾಮಯ್ಯ ಸರ್ಕಾರದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕ ಆಗಿದ್ದ. ಈತ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಪರಮ ಆಪ್ತ ಎನ್ನಲಾಗಿದೆ. ಕರ್ಜಗಿ ಧಾರವಾಡದ ವಿದ್ಯಾಗಿರಿ ಬಡಾವಣೆಯಲ್ಲಿ ಲೇಮೋಸ್ ಯುನಿಸೆಕ್ಸ್ ಸಲೂನ್ ಆ್ಯಂಡ್ ಸ್ಪಾ ನಡೆಸುತ್ತಿದ್ದಾನೆ.

ಭಾನುವಾರ ಮಧ್ಯಾಹ್ನ ಸ್ಪಾದಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಬ್ಯೂಟಿಷಿಯನ್ ಜೊತೆ ಸ್ಪಾ ಕ್ಲೀನ್ ಆಗಿ ಇಟ್ಟಿಲ್ಲ ಎಂಬ ವಿಚಾರವಾಗಿ ಕಿರಿಕ್ ಮಾಡಿದ್ದಾನೆ. ಬಳಿಕ ಆಕೆಯನ್ನು ತಬ್ಬಿಕೊಂಡು ಮುತ್ತು ಕೊಡಲು ಯತ್ನಿಸಿದ್ದಾನೆ. ಈ ವೇಳೆ ಅಲ್ಲಿಂದ ಕೂಗಾಡುತ್ತಾ ಹೊರ ಬಂದ ಯುವತಿ, ತನ್ನ ಸ್ನೇಹಿತರನ್ನು ಅಲ್ಲಿಗೆ ಕರೆಯಿಸಿಕೊಂಡಿದ್ದಾಳೆ. ಆಗ ಸ್ಪಾಗೆ ಬಂದ ಯುವತಿಯ ಸ್ನೇಹಿತರ ಗುಂಪು ಮನೋಜ್‍ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದನ್ನೂ ಓದಿ : Paola Maino : ಕಾಂಗ್ರೆಸ್​​ ಅಧ್ಯಕ್ಷೆ ಸೋನಿಯಾ ಗಾಂಧಿ ತಾಯಿ ನಿಧನ

ಗಲಾಟೆ ವೇಳೆ ಆಯನ್ ನದಾಫ್ ಎಂಬಾತನಿಗೆ ಗಾಯವಾಗಿದ್ದು, ಈತನೊಂದಿಗೆ ಮನೋಜ್‍ ಕರ್ಜಗಿ (Manoj Karjagi) ನಮ್ಮ ಮೇಲೆ ಗುಂಪೊಂದು ಹಲ್ಲೆ ಮಾಡಿ ಪರಾರಿಯಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ವಿದ್ಯಾಗಿರಿ ಠಾಣೆಗೆ ಬಂದ ಯುವತಿ, ಮನೋಜ್‍ ಕರ್ಜಗಿ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಿಸಿದ್ದು, ಸದ್ಯ ಕರ್ಜಗಿಯನ್ನು ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮತ್ತೊಂದೆಡೆ ಹಲ್ಲೆ ಮಾಡಿದವರ ಮೇಲೂ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ಈ ಸಂಬಂಧ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ : Bharat Jodo Yatra : ತರಕಾರಿ ಅಂಗಡಿಯಲ್ಲಿ ದೇಣಿಗೆ ಕೇಳಿದ್ದ ಕಾರ್ಯಕರ್ತರ ಕಾಂಗ್ರೆಸ್ ವಜಾ

LEAVE A REPLY

Please enter your comment!
Please enter your name here