ಪೇರುಪೇಟೆಯಲ್ಲಿ ರಿಲಯನ್ಸ್, ಪೇಟಿಎಂ ತಲ್ಲಣ..! – 8 ತಿಂಗಳ ಬಳಿಕ ಪೇರುಪೇಟೆಯಲ್ಲಿ ಮಹಾ ಕುಸಿತ

ನಾಗಾಲೋಟದಿಂದ ಮುನ್ನುಗ್ಗುತ್ತಿದ್ದ ಷೇರು ಮಾರುಕಟ್ಟೆ ಇವತ್ತು ರಿಲಯನ್ಸ್ ಪರಿಣಾಮಕ್ಕೆ ಒಂದೇ ದಿನ ಮತ್ತೆ ಭಾರೀ ಕುಸಿತ ಕಂಡಿದೆ. ಮುಂಬೈ ಷೇರು ಮಾರುಕಟ್ಟೆ ದಿನದ ವ್ಯವಹಾರದ ಅಂತ್ಯಕ್ಕೆ 1,170 ಅಂಕಗಳಷ್ಟು ಕುಸಿದರೆ, ನಿಫ್ಟಿ 348 ಅಂಕಗಳಷ್ಟು ಕುಸಿತ ಕಂಡಿದೆ.

ಪೆಟ್ರೋಲಿಯA ಉತ್ಪನ್ನಗಳ ಕಂಪನಿ ರಿಲಯನ್ಸ್ ಇಂಡಸ್ಟಿçÃಸ್ ನ 15 ಬಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ಸೌದಿ ಅರ್ಮಾಕೋಗೆ ಮಾರಾಟ ಮಾಡುವ ನಿರ್ಧಾರವನ್ನು ತಡೆ ಹಿಡಿದ ಕಾರಣ ರಿಲಯನ್ಸ್ ಕಂಪನಿಯ ಷೇರುಗಳ ಮೌಲ್ಯ 300 ಅಂಕಗಳಷ್ಟು ಕುಸಿತ ಕಂಡಿತು.

ಪೇಟಿಎA ಐಪಿಒ ಬಗ್ಗೆ ಆರಂಭದಲ್ಲೇ ಸೃಷ್ಟಿ ಆಗಿರುವ ನಿರಾಸಕ್ತಿಯಿಂದಲೂ ಷೇರು ಪೇಟೆ ಕುಸಿತದತ್ತ ಮುಖ ಮಾಡಿದೆ. ಏಪ್ರಿಲ್ 12ರ ಬಳಿಕ ಇವತ್ತು ಅತೀ ಹೆಚ್ಚು ಕುಸಿತ ಕಂಡಿದ್ದು, ಸತತ 4 ದಿನವೂ ಪೇರು ಪೇಟೆ ಕೆಳಮುಖಿ ಆಗಿದೆ.

1 ಲಕ್ಷ ಕೋಟಿ ರೂ. ಅಧಿಕ ಮೊತ್ತದ ಬಂಡವಾಳ ಎತ್ತುವ ನಿರೀಕ್ಷೆಯಲ್ಲಿದ್ದ ಪೇಟಿಎಂನ ಷೇರು ಮೌಲ್ಯ 1,950 ರೂ. ಗಳಿಂದ 1,362 ರೂ. ಗೆ ಕುಸಿದಿದೆ. ಈ ಮೂಲಕ ಪೇಟಿಎಂ ಐಪಿಒ ಷೇರುಗಳ ಒಟ್ಟು ಮೌಲ್ಯ 56,233 ಕೋಟಿ ರೂ.ಗೆ ಬಂದು ನಿಂತಿದೆ.

 

LEAVE A REPLY

Please enter your comment!
Please enter your name here