ಸ್ಯಾಂಡಲ್ವುಡ್ನ ಹಿರಿಯ ನಟ ಅಶೋಕ್ರಾವ್ ಇಂದು ನಿಧನರಾಗಿದ್ದಾರೆ.
2021 ರ ಸಾಲಿನಲ್ಲಿ ಕನ್ನಡದ ಪ್ರಮುಖ ನಟರು, ನಿರ್ದೇಶಕರು, ನಿರ್ಮಾಪಕರು ಹಾಗೂ ತಂತ್ರಜ್ಞರು ಸ್ಯಾಂಡಲ್ವುಡ್ ಚಿತ್ರರಂಗವನ್ನು ಬಿಟ್ಟು ಅಗಲಿದ್ದಾರೆ. ಯುವರತ್ನ ಪುನೀತ್ ರಾಜ್ಕುಮಾರ್, ನಟ ಶಿವರಾಂ, ನಿರ್ಮಾಪಕ ಕೋಟಿ ರಾಮು, ನಿರ್ದೇಶಕ ಪ್ರದೀಪ್ ರಾಜ್ ಹಾಗೂ ಮತ್ತಿತರರನ್ನು ಸ್ಮರಿಸಬಹುದು.
ಕ್ಯಾನ್ಸರ್ ಕಾಯಿಲೆಯಿಂದ ಬಳಲುತಿದ್ದ ಅಶೋಕ್ ರಾವ್ ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದಾರೆ. ವಿದ್ಯಾರಣ್ಯಪುರದ ನಿವಾಸದಲ್ಲಿ ಅಶೋಕ್ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ..
ಕನ್ನಡದ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಶೋಕ್ ರಾವ್ ನಟಿಸಿದ್ದರು. ಅಶೋಕ್ ಅವರು ಅವರ ಕಂಚಿನ ಕಂಠದಿಂದಲೇ ಚಿತ್ರರಂಗದಲ್ಲಿ ಗುರುತಿಸಿ ಕೊಂಡಿದ್ದರು.