ದೇಶದ್ರೋಹ ಪ್ರಕರಣ: ಬೀದರ್​ ಶಾಲೆಯ 4 ಮಕ್ಕಳ ವಿರುದ್ಧದ ಕೇಸ್​ ವಜಾ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೀದರ್​ ಜಿಲ್ಲೆಯ ಖಾಸಗಿ ಶಾಲೆಯ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣವನ್ನು ಹೈಕೋರ್ಟ್​ ರದ್ದುಗೊಳಿಸಿದೆ.

ಬೀದರ್​ನ ಶಾಹೀನ್​ ಅಂತಾರಾಷ್ಟ್ರೀಯ ಶಾಲೆಯ ನಾಲ್ವರು ಮಕ್ಕಳ ವಿರುದ್ಧ 2020ರ ಜನವರಿಯಲ್ಲಿ ದೇಶದ್ರೋಹ ಆರೋಪದಡಿ ಎಫ್​ಆರ್​ ದಾಖಲಿಸಲಾಗಿತ್ತು.

ಪ್ರಕರಣ ವಜಾಗೊಳಿಸಿ ನ್ಯಾಯಮೂರ್ತಿ ಹೇಮಂತ್​ ಚಂದನಗೌಡರ್​ ಅವರಿದ್ದ ಪೀಠ ಆದೇಶಿಸಿದೆ.

ನಾಗರಿಕತ್ವ ಕಾಯ್ದೆ ಬಗ್ಗೆ ನಾಟಕ ಪ್ರದರ್ಶನದ ವೇಲೆ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದ್ದ ಆರೋಪದಡಿಯಲ್ಲಿ ಬೀದರ್​ ಪೊಲೀಸರು ಐಪಿಸಿ ಸೆಕ್ಷನ್​ 504, 505(2), 124(2) ಮತ್ತು 153(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಬಳಿಕ ಶಾಲೆಗೆ ತೆರಳಿ ಪೊಲೀಸರು ಮಕ್ಕಳ ವಿಚಾರಣೆಯನ್ನೂ ನಡೆಸಿದ್ದರು.

ಈ ಪ್ರಕರಣದಲ್ಲಿ ಶಾಲೆಗೆ ತೆರಳಿ ಪೊಲೀಸರು ವಿಚಾರಣೆ ನಡೆಸಿದ್ದು 2015ರ ಬಾಲ್ಯ ನ್ಯಾಯ ಕಾಯ್ದೆಯ ಉಲ್ಲಂಘನೆ ಎಂದು ಹೈಕೋರ್ಟ್​ 2021ರಲ್ಲಿ ಅಭಿಪ್ರಾಯಪಟ್ಟಿತ್ತು.