ಬೇನಾಮಿ ಕಾಯ್ದೆಯ ಪೂರ್ವಾನ್ವಯ ಇಲ್ಲ – ಸುಪ್ರೀಂಕೋರ್ಟ್​​ ಐತಿಹಾಸಿಕ ತೀರ್ಪು

2016ರಲ್ಲಿ ಬೇನಾಮಿ ಕಾಯ್ದೆಯನ್ನು ಪೂರ್ವಾನ್ವಯದಿಂದ ಜಾರಿಗೊಳಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್​​ ಐತಿಹಾಸಿಕ ತೀರ್ಪು ನೀಡಿದೆ.
ಈ ಮೂಲಕ 2016ರ ಬಳಿಕದ ಅಂದರೆ ಕಾಯ್ದೆ ಜಾರಿ ಆದ ಬಳಿಕದ ಅಪರಾಧ ಮತ್ತು ದಾಖಲಾದ ಪ್ರಕರಣಗಳಿಗಷ್ಟೇ ಬೇನಾಮಿ ಕಾಯ್ದೆಯನ್ನು ಅನ್ವಯಿಸಲು ಸಾಧ್ಯ.
ಬೇನಾಮಿ ವರ್ಗಾವಣೆ ನಿಷೇಧ ಕಾಯ್ದೆ – 2016ರ ಸೆಕ್ಷನ್​ 3ನ್ನು ಸುಪ್ರೀಂಕೋರ್ಟ್​​ ಅಸಂವಿಧಾನಿಕ ಮತ್ತು 20(1)ರಡಿಯಲ್ಲಿ ಕೊಡಮಾಡಲಾದ ಹಕ್ಕಿನ ಉಲ್ಲಂಘನೆ ಎಂದು ತೀರ್ಪು ನೀಡಿದೆ.
ಸಂವಿಧಾನದ 20(1) ವಿಧಿಯ ಪ್ರಕಾರ ಯಾವುದೇ ವ್ಯಕ್ತಿಗೆ ಆತ ಕೃತ್ಯ ಎಸಗಿದ ಸಂದರ್ಭದಲ್ಲಿ ಜಾರಿಯಲ್ಲಿರುವ ಕಾನೂನಿನ ಆಧಾರದಲ್ಲಷ್ಟೇ ಶಿಕ್ಷೆ ನೀಡಬಹುದೇ ಹೊರತು ಆ ಬಳಿಕ ಜಾರಿ ಆಗುವ ಕಾನೂನುಗಳನ್ನು ಕೃತ್ಯ ಸಂಬಂಧ ಶಿಕ್ಷಿಸುವ ವೇಳೆ ಪೂರ್ವಾನ್ವಯಗೊಳಿಸುವಂತಿಲ್ಲ.
ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್​ ವಿ ರಮಣ, ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಕೃಷ್ಣ ಮುರಾರಿ ಅವರಿದ್ದ ಪೀಠ ಐತಿಹಾಸಿಕ ತೀರ್ಪು ನೀಡಿದೆ.
2016ರಲ್ಲಿ ತಿದ್ದುಪಡಿ ಆದ ಬೇನಾಮಿ ಕಾಯ್ದೆ ಪೂರ್ವಾನ್ವಯ ಮಾಡುವಂತಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್​ ನೀಡಿದ್ದ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

LEAVE A REPLY

Please enter your comment!
Please enter your name here