ಕಾರಿನ ಹಿಂಬದಿ ಸವಾರರಿಗೂ ಸೀಟ್​ಬೆಲ್ಟ್​ ಕಡ್ಡಾಯ – ಕೇಂದ್ರ ಸರ್ಕಾರ

Seatbelt Compulsary

ಕಾರಿನ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುವ ಸವಾರರೂ ಸೀಟ್​ಬೆಲ್ಟನ್ನು ಕಡ್ಡಾಯವಾಗಿ (Seatbelt Compulsary) ಧರಿಸಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಲು ನಿರ್ಧರಿಸಿದೆ.

ಈ ಸಂಬಂಧ ಇನ್ನು ಮೂರು ದಿನಗಳಲ್ಲಿ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅಧಿಸೂಚನೆ ಹೊರಡಿಸಲಿದ್ದಾರೆ.

ಸೀಟ್ ಬೆಲ್ಟ್ ಧರಿಸದೇ ಪ್ರಯಾಣಿಸುವವರಿಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿದುಬಂದಿದೆ. ಅಧಿಸೂಚನೆಯ ಬಳಿಕವಷ್ಟೇ ದಂಡದ ಪ್ರಮಾಣವೆಷ್ಟು ಎನ್ನುವುದರ ಬಗ್ಗೆ ತಿಳಿದುಬರಲಿದೆ. ಇದನ್ನೂ ಓದಿ : BIG BREAKING: ಅಪಘಾತದಲ್ಲಿ TATA Sons ಮಾಜಿ ಮುಖ್ಯಸ್ಥ, ಉದ್ಯಮಿ ಸೈರಸ್​ ಮಿಸ್ತ್ರಿ ಸಾವು

ಇನ್ನು, ನಿನ್ನೆ ಸೋಮವಾರವಷ್ಟೇ ಡಾಡಾ ಸನ್ಸ್​ ಸಂಸ್ಥೆಯ ಚೇರ್​ಮನ್ ಆಗಿದ್ದ ಸೈರಸ್ ಮಿಸ್ತ್ರಿಯವರು ಗುಜರಾತ್​ನ ಉದ್ವಾಡದಿಂದ ಮುಂಬೈಗೆ ಕಾರಿನಲ್ಲಿ ಪ್ರಯಾಣಿಸುವ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು. ಕಾರಿನ ಹಿಂಬದಿಯಲ್ಲಿ ಕೂತಿದ್ದ ಇವರು ಸೀಟ್ ಬೆಲ್ಟ್ ಧರಿಸಿರಲಿಲ್ಲ.

ಈ ಹಿನ್ನೆಲೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಕಾರಿನ ಹಿಂಬದಿಯಲ್ಲಿ ಪ್ರಯಾಣಿಸುವವರಿಗೂ ಸೀಟ್​ ಬೆಲ್ಟ್​ ಕಡ್ಡಾಯ (Seatbelt Compulsary) ಎಂಬ ಆದೇಶ ಹೊರಡಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.  ಇದನ್ನೂ ಓದಿ : ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಕಾರು ಅಪಘಾತ : ಪ್ರಾಣಾಪಾಯದಿಂದ ಪಾರು

LEAVE A REPLY

Please enter your comment!
Please enter your name here