ಆಗಸ್ಟ್ ಮೊದಲ ವಾರದಲ್ಲೇ ಶಾಲೆಗಳು ಮತ್ತೆ ಆರಂಭ..?

ಆಗಸ್ಟ್ ಮೊದಲ ವಾರದಲ್ಲಿ ರಾಜ್ಯದಲ್ಲಿ ಶಾಲೆಗಳು ಆರಂಭ ಆಗುವ ಸಾಧ್ಯತೆ ಇದೆ. ಹಂತಹAತವಾಗಿ ಶಾಲೆಗಳನ್ನು ಆರಂಭಿಸುವAತೆ ರಾಜ್ಯ ಶಿಕ್ಷಣ ಇಲಾಖೆಗೆ ತಜ್ಞರ ಸಮಿತಿ ಸಲಹೆ ನೀಡಿದೆ.

ಶಾಲೆಗಳನ್ನು ಆರಂಭಿಸುವ ಬಗ್ಗೆ ಜುಲೈ ಕೊನೆ ವಾರದಲ್ಲಿ ಸರ್ಕಾರವೇ ರಚಿಸಿರುವ ಕಾರ್ಯಪಡೆಯ ಸಲಹೆ ಆಧರಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮಂಗಳವಾರವಷ್ಟೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದರು.

ಹಂತಹAತವಾಗಿ ಶಾಲೆಗಳನ್ನು ಮತ್ತೆ ಆರಂಭಿಸುವAತೆ ಸಲಹೆ ನೀಡಲಾಗಿದೆ. ಮೊದಲ ಹಂತದಲ್ಲಿ ೮ನೇ ತರಗತಿಯಿಂದ ಶಾಲೆಗಳ ಆರಂಭಕ್ಕೆ ಶಿಫಾರಸ್ಸು ಮಾಡಲಾಗಿದೆ. ಇವತ್ತು ಅಥವಾ ನಾಳೆ ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಆ ಬಳಿಕ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ.

ಶಾಲೆಗಳನ್ನು ತೆರೆಯಬೇಕೇ ಬೇಡವೇ ಎಂಬ ಸಲಹೆ ನೀಡಲು ಸರ್ಕಾರ ರಚಿಸಿದ್ದ ಈ ಸಮಿತಿಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ಶಿಕ್ಷಣ ತಜ್ಞರು, ಮಕ್ಕಳ ವೈದ್ಯರು, ಪೋಷಕರ ಸಂಘದ ಪ್ರತಿನಿಧಿಗಳು ಮತ್ತು ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಪ್ರತಿನಿಧಿಗಳೂ ಇದ್ದಾರೆ. ಈ ಸಮಿತಿಯ ಎಲ್ಲ ಸದಸ್ಯರು ಸರ್ವಸಮ್ಮತದಿಂದ ಶಾಲೆಗಳ ಆರಂಭಕ್ಕೆ ಸಲಹೆ ನೀಡಿದ್ದಾರೆ.

ಮಂಗಳವಾರವಷ್ಟೇ ಐಸಿಎಂಆರ್ ಕೂಡಾ ಶಾಲೆಗಳನ್ನು ಮತ್ತೆ ಆರಂಭಿಸುವAತೆಯೂ ಮೊದಲ ಹಂತದಲ್ಲಿ ಪ್ರಾಥಮಿಕ ಶಾಲೆಗಳನ್ನೇ ತೆರೆಯುವಂತೆ ಸಲಹೆ ನೀಡಿತ್ತು. ಡಾ ದೇವಿಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ರಾಜ್ಯ ಸರ್ಕಾರ ನೇಮಿಸಿದ್ದ ಸಮಿತಿಯೂ ಶಾಲೆಗಳನ್ನು ಆರಂಭಿಸುವAತೆ ಕಳೆದ ತಿಂಗಳಲ್ಲೇ ಶಿಫಾರಸ್ಸು ಮಾಡಿತ್ತು.

ಈ ಎಲ್ಲ ವರದಿಗಳು ಮತ್ತು ಶಿಫಾರಸ್ಸುಗಳ ಹಿನ್ನೆಲೆಯಲ್ಲಿ ಆಗಸ್ಟ್ ಮೊದಲ ವಾರದಲ್ಲೇ ಶಾಲೆ ಆರಂಭ ಖಚಿತವಾಗುತ್ತಿದೆ.

LEAVE A REPLY

Please enter your comment!
Please enter your name here