ADVERTISEMENT
ಒಂದನೇ ತರಗತಿಗೆ ದಾಖಲು ಮಾಡಲು ಮಗುವಿಗೆ 6 ವರ್ಷ ಭರ್ತಿ ಆಗಿರುವುದು ಕಡ್ಡಾಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.
ಒಂದನೇ ತರಗತಿಗೆ ದಾಖಲು ಮಾಡಲು ಕನಿಷ್ಠ ವಯೋಮಿತಿಯನ್ನು ಐದೂವರೆ ವರ್ಷ (5.5) ವರ್ಷಗಳ ಬದಲಾಗಿ ಶೈಕ್ಷಣಿಕ ವರ್ಷ ಆರಂಭ ಆಗುವ ಜೂನ್ 01ಕ್ಕೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡಿರಬೇಕೆಂದು ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ.
ADVERTISEMENT