ADVERTISEMENT
7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ಭಾರತೀಯ ಚುನಾವಣಾ ಆಯೋಗ ಉಪ ಚುನಾವಣೆ ಘೋಷಿಸಿದೆ.
- ಬಿಹಾರ – ರುಪೌಲಿ ವಿಧಾನಸಭಾ ಕ್ಷೇತ್ರ
- ಪಶ್ಚಿಮ ಬಂಗಾಳ – ರಾಯ್ಗಂಜ್
- ಪಶ್ಚಿಮ ಬಂಗಾಳ – ರಣಾಘಾಟ್ ದಕ್ಷಿಣ್
- ಪಶ್ಚಿಮ ಬಂಗಾಳ – ಬಾಗ್ಡಾ
- ಪಶ್ಚಿಮ ಬಂಗಾಳ – ಮಣಿಕ್ಟಾಲಾ
- ತಮಿಳುನಾಡು – ವಿಕ್ರವಂಡಿ
- ಮಧ್ಯಪ್ರದೇಶ – ಅಮರ್ವಾರಾ
- ಉತ್ತರಾಖಂಡ್ – ಬದರಿನಾಥ್
- ಉತ್ತರಾಖಂಡ್ – ಮಂಗ್ಲೌರ್
- ಪಂಜಾಬ್ – ಜಲಂಧರ್ ಪಶ್ಚಿಮ
- ಹಿಮಾಚಲಪ್ರದೇಶ – ದೆಹ್ರಾ
- ಹಿಮಾಚಲಪ್ರದೇಶ – ಹಮಿರ್ಪುರ್
- ಹಿಮಾಚಲಪ್ರದೇಶ – ನಾಳಾಘರ್
ಜುಲೈ 10ರಂದು ಮತದಾನ ನಡೆಯಲಿದ್ದು, ಜುಲೈ 13ರಂದು ಫಲಿತಾಂಶ ಪ್ರಕಟವಾಗಲಿದೆ.
ಲೋಕಸಭಾ ಚುನಾವಣೆಯ ಬಳಿಕ ನಡೆಯುತ್ತಿರುವ ಮೊದಲ ಉಪ ಚುನಾವಣೆ ಇದಾಗಿದೆ.
ಶಾಸಕರ ರಾಜೀನಾಮೆ ಕಾರಣದಿಂದ 10 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಶಾಸಕರ ನಿಧನದ ಕಾರಣದಿಂದ 3 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ.
ಹಿಮಾಚಲಪ್ರದೇಶದ ಮೂರು ಪಕ್ಷೇತರ ಶಾಸಕರು ಲೋಕಸಭಾ ಫಲಿತಾಂಶಕ್ಕೂ ಹಿಂದಿನ ದಿನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು ಮತ್ತು ಮರು ದಿನ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಜೂನ್ 4ರಂದು ಪ್ರಕಟವಾಗಿದ್ದ 6 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ 4ರಲ್ಲಿ ಕಾಂಗ್ರೆಸ್ ಗೆದ್ದರೆ 2ರಲ್ಲಿ ಬಿಜೆಪಿ ಗೆದ್ದಿತ್ತು.
68 ಸದಸ್ಯ ಬಲದ ವಿಧಾನಸಭೆಯಲ್ಲಿ ಸದ್ಯ ಕಾಂಗ್ರೆಸ್ 38 ಶಾಸಕರನ್ನು ಹೊಂದಿದ್ದು, ಬಿಜೆಪಿ 27 ಶಾಸಕರನ್ನು ಹೊಂದಿದೆ. 3 ಕ್ಷೇತ್ರಗಳಿಗೆ ಇವತ್ತು ಉಪ ಚುನಾವಣೆ ಘೋಷಣೆ ಆಗಿದೆ.
ADVERTISEMENT