ಸೌದಿ ಅರೇಬಿಯಾದ ಜೆದ್ದಾ ನಗರದಲ್ಲಿ ಕಳೆದ 30 ವರ್ಷದಿಂದ ಶೌಚಾಲಯದಲ್ಲಿಯೇ ಸಮೋಸ ಹಾಗೂ ಇನ್ನಿತರೆ ಸ್ನ್ಯಾಕ್ಸ್ಗಳನ್ನು ತಯಾರಿಸುತ್ತಿದ್ದ ರೆಸ್ಟೋರೆಂಟ್ ಮೇಲೆ ಜೆದ್ದಾ ನಗರಾಡಳಿತ ದಾಳಿ ಮಾಡಿದ್ದು, ರೆಸ್ಟೋರೆಂಟ್ನ್ನು ಬಂದ್ ಮಾಡಿದೆ ಎಂದು ಗಲ್ಪ್ ನ್ಯೂಸ್ ವರದಿ ಮಾಡಿದೆ.
ವರದಿಗಳ ಪ್ರಕಾರ, ರೆಸ್ಟೋರೆಂಟ್ ಕುರುಕಲು ತಿಂಡಿ(ಸ್ನ್ಯಾಕ್ಸ್) ಮತ್ತು ಊಟವನ್ನೂ ವಾಶ್ ರೂಂನಲ್ಲಿ ತಯಾರಿಸುತ್ತಿತ್ತು. ಜೆದ್ದಾ ಮುನ್ಸಿಪಾಲಿಟಿ ಅಧಿಕಾರಿಗಳು ಅವಧಿ ಮೀರಿದ ಮಾಂಸ ಹಾಗೂ ಚೀಸ್ಗಳನ್ನು ಈ ರೆಸ್ಟೋರೆಂಟ್ ಬಳಸುವುದನ್ನು ಪತ್ತೆ ಹೆಚ್ಚಿದ್ದಾರೆ. ಕೆಲವೊಂದು ಆಹಾರ ಪದಾರ್ಥಗಳು 2 ವರ್ಷದ ಹಿಂದೆಯೇ ಅವಧಿ ಮೀರಿವೆ. ಅಲ್ಲದೇ, ಊಟ ತಯಾರಿಸುವ ಸ್ಥಳದಲ್ಲಿ ಹಲವಾರು ತರಹದ ಕೀಟಗಳು ಇರುವುದನ್ನು ಅಧಿಕಾರಿಗಳು ಗಮನಿಸಿದ್ದಾರೆ.
30 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ರೆಸ್ಟೋರೆಂಟ್ ಆರೋಗ್ಯ ಕಾರ್ಡ್ನ್ನು ಪಡೆದಿರಲಿಲ್ಲ. ಅಲ್ಲದೇ, ಈ ರೆಸ್ಟೋರೆಂಟ್ ಸ್ಪಷ್ಟವಾಗಿ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ಅಧಿಕಾರಿಗಳು ಟಿಪ್ಪಣಿ ನೀಡಿದ್ದು, ರೆಸ್ಟೋರೆಂಟ್ಗೆ ಬೀಗ ಹಾಕಿದ್ದಾರೆ.
ಸೌದಿ ಅರೇಬಿಯಾದಲ್ಲಿ ಅನೈರ್ಮಲ್ಯದಿಂದ ಹೋಟೆಲ್ ಅಥವಾ ರೆಸ್ಟೋರೆಂಟ್ಗಳು ಬಂದಾಗಿರುವುದು ಇದೇ ಮೊದಲಲ್ಲ. ಗಲ್ಪ್ ನ್ಯೂಸ್ ಪ್ರಕಾರ, ಜನವರಿಯಲ್ಲಿ ಇದೇ ಜೆದ್ದಾ ನಗರದ ಪ್ರಸಿದ್ದ ಸ್ವರ್ಮ ರೆಸ್ಪೋರೆಂಟ್ ನಲ್ಲಿ ಇಲಿ ಗ್ರಾಹಕರ ಸುತ್ತ ಓಡಾಟ ಮಾಡುವುದು ಹಾಗೂ ತಯಾಸಿಸಿ ಇಟ್ಟಿದ್ದ ಮಾಂಸವನ್ನು ತಿನ್ನುವ ವೀಡಿಯೋ ಸಾಮಾಜಿ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ನಾಗರೀಕರು ಈ ರೆಸ್ಟೋರೆಮಟ್ ವಿರುದ್ಧ ಸಿಡಿದೆದ್ದಿದ್ದರು. ಅನಂತರ ಅಲ್ಲಿನ ಸ್ಥಳೀಯ ಆಡಳಿತ ಈ ರೆಸ್ಟೋರೆಂಟ್ಗೆ ಬೀಗ ಹಾಕಿತ್ತು.
https://youtu.be/t2vjO3ovlkU