ಸ್ತ್ರೀ ಸಲಿಂಗಿ ಮಾಜಿ ಕ್ರಿಕೆಟ್​ ಆಟಗಾರ್ತಿ ಸಾರಾ ಟೇಲರ್​ ದಂಪತಿಗೆ ಗಂಡು ಮಗು

ಇಂಗ್ಲೆಂಡ್​ ಕ್ರಿಕೆಟ್​ ತಂಡದ ಮಾಜಿ ಆಟಗಾರ್ತಿ ಸಾರಾ ಟೇಲರ್​ ದಂಪತಿಗೆ ಗಂಡು ಮಗುವಾಗಿದೆ. ತನ್ನ ಜೊತೆಗಾರ್ತಿ ಡಯಾನಾ ಮೈನ್​ ಗಂಡು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಟೇಲರ್​ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಾರಾ ಟೇಲರ್​ ಅವರ ಸ್ತ್ರೀ ಸಲಿಂಗಿಯಾಗಿದ್ದು, ಇದೇ ಫೆಬ್ರವರಿಯಲ್ಲಿ ತನ್ನ ಸಂಗಾತಿ ಡಯಾನಾ ಗರ್ಭಿಣಿ ಆಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.

34 ವರ್ಷದ ಸಾರಾ ಟೇಲರ್​-ಡಯಾನಾ ದಂಪತಿ ತಮ್ಮ ಮಗುವಿಗೆ ಲೌರಿ ಎಂದು ನಾಮಕರಣ ಮಾಡಿದ್ದಾರೆ.

2009 ಮತ್ತು 2017ರಲ್ಲಿ ಮಹಿಳಾ ವಿಶ್ವಕಪ್​ ಗೆದ್ದ ಬ್ರಿಟನ್​ ತಂಡದಲ್ಲಿದ್ದ ಸಾರಾ ಟೇಲರ್​ 2009ರಲ್ಲಿ ಟಿ-ಟ್ವೆಂಟಿ ವಿಶ್ವಕಪ್​ ಗೆದ್ದ ತಂಡದಲ್ಲೂ ಆಡಿದ್ದರು.

126 ಏಕದಿನ ಪಂದ್ಯದಲ್ಲಿ 4,056 ರನ್​ ಗಳಿಸಿರುವ ಸಾರಾ 7 ಶತಕ ಮತ್ತು 20 ಅರ್ಧಶತಕ ಗಳಿಸಿದ್ದಾರೆ.

90 ಟಿ-ಟ್ವೆಂಟಿ ಪಂದ್ಯದಲ್ಲಿ 2,177 ರನ್​ ಗಳಿಸಿರುವ ಸಾರಾ ಟೇಲರ್​ 16 ಅರ್ಧಶತಕ ಗಳಿಸಿದ್ದಾರೆ. ಆಸ್ಟ್ರೇಲಿಯಾದ ವಿಕೆಟ್​ ಕೀಪರ್​ ಆ್ಯಡಂ ಗಿಲ್​ಕ್ರಿಸ್ಟ್​ ಅವರು ಸಾರಾ ಅವರನ್ನು ವಿಶ್ವದ ಅತ್ಯುತ್ತಮ ವಿಕೆಟ್​ ಕೀಪರ್​ ಎಂದು ಹೊಗಳಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಏಕದಿನ ಪಂದ್ಯದಲ್ಲಿ 85 ಕ್ಯಾಚ್​ ಮತ್ತು 51 ಸ್ಟಂಪಿಂಗ್​ ಮಾಡಿರುವ ಸಾರಾ ಟೇಲರ್​ ಟಿ-ಟ್ವೆಂಟಿಯಲ್ಲಿ 23 ಕ್ಯಾಚ್​ ಮತ್ತು 51 ಸ್ಟಂಪಿಂಗ್​ ಮಾಡಿದ್ದಾರೆ. 2019ರಲ್ಲಿ ಸಾರಾ ಟೇಲರ್​ ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ದರು.

LEAVE A REPLY

Please enter your comment!
Please enter your name here