ತೆಲುಗು ನಟ ವಿಜಯ್ ದೇವರಕೊಂಡ ಜೊತೆಗೆ ನಾನು ಡೇಟಿಂಗ್ ಮಾಡ್ಬೇಕು ಎಂಬ ಆಸೆಯನ್ನು ನಟಿ ಸಾರಾ ಅಲಿ ಖಾನ್ ಬಹಿರಂಗಪಡಿಸಿದ್ದಾಳೆ.
ಕಾಫಿ ವಿತ್ ಕರಣ್ ಶೋದಲ್ಲಿ ನೀವು ಯಾರ ಜೊತೆಗೆ ಡೇಟಿಂಗ್ ಮಾಡಲು ಬಯಸುತ್ತೀರಿ ಆ ಹುಡುಗನ ಹೆಸರು ಹೇಳಿ ಎಂದು ಸಾರಾ ಅಲಿ ಖಾನ್ಗೆ ಪ್ರಶ್ನೆ ಮಾಡ್ತಾರೆ.
ಮೊದಲು ಹೆಸರು ಹೇಳಲು ಹಿಂಜರಿದ ಸಾರಾ ಅಲಿ ಖಾನ್ ಬಳಿಕ ವಿಜಯ್ ದೇವರಕೊಂಡ ಎಂದು ಹೇಳುತ್ತಾಳೆ.
ಸಾರಾ ಅಲಿ ಖಾನ್ ಮಾತಿಗೆ ವಿಜಯ್ ದೇವರಕೊಂಡ ಪ್ರತಿಕ್ರಿಯಿಸಿದ್ದಾರೆ. ವಿಜಯ್ ದೇವರಕೊಂಡ ಎಂದು ನೀವು ಹೇಳುವ ರೀತಿಯನ್ನು ನಾನು ಇಷ್ಟಪಡುತ್ತೇನೆ ಎಂದು ಇನ್ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ದೇವರಕೊಂಡ ಹಗ್ ಇಮೋಜಿಯನ್ನು ಅಟ್ಯಾಚ್ ಮಾಡಿದ್ದಾರೆ.