ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಂಗಳೂರಲ್ಲಿ ಸ್ಯಾಂಕಿ ಕೆರೆ ರಕ್ಷಣೆ ಹೋರಾಟಗಾರರ ಮೇಲೆ ದಾಖಲಿಸಿದ್ದ ಪ್ರಕರಣವನ್ನು ಪೊಲೀಸರು ವಾಪಸ್ ಪಡೆದಿದ್ದಾರೆ.
ಈ ಬಗ್ಗೆ ಹಲಸೂರು ಗೇಟ್ ಠಾಣೆ ಪೊಲೀಸರು ಮೇ 30ರಂದು ಅಂದರೆ ಇವತ್ತು ಬೆಂಗಳೂರಿನ ಕೋರ್ಟ್ಗೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ ಎಂದು News Minute ವರದಿ ಮಾಡಿದೆ.
ಮೇ 29ರಂದು ಅಂದರೆ ನಿನ್ನೆ ಸೋಮವಾರ ಕರ್ನಾಟಕ ಹೈಕೋರ್ಟ್ ಪೊಲೀಸರ ತನಿಖೆಗೆ ತಡೆಯಾಜ್ಞೆ ನೀಡಿತ್ತು.
ಫೆಬ್ರವರಿ 19ರಂದು ಮಲ್ಲೇಶ್ವರಂನಲ್ಲಿರುವ ಸ್ಯಾಂಕಿ ಕೆರೆ ಪ್ರದೇಶದಲ್ಲಿ ಮೇಲ್ಸೇತುವೆ ಕಾಮಗಾರಿ ಕೈಗೊಳ್ಳದಂತೆ ಮತ್ತು ರಸ್ತೆ ಅಗಲೀಕರಣ ಮಾಡದಂತೆ ಶಾಂತಿಯುತ ಪ್ರತಿಭಟನೆ ನಡೆದಿತ್ತು.
ಬಿಜೆಪಿ ಶಾಸಕ, ಮಾಜಿ ಸಚಿವ ಡಾ ಸಿ ಎನ್ ಅಶ್ವತ್ಥ್ ನಾರಾಯಣ ಅವರ ಕ್ಷೇತ್ರದ ವ್ಯಾಪ್ತಿ ಸ್ಯಾಂಕಿ ಕೆರೆ ಬರುತ್ತದೆ.
ಶಾಂತಿಯುತ ಹೋರಾಟ ಕೈಗೊಂಡಿದ್ದ 8 ಮಂದಿ ನಾಗರಿಕರು ಮತ್ತು 70 ಮಂದಿ ಅಪರಿಚಿತರ ವಿರುದ್ಧ ಪೊಲೀಸರು ಐಪಿಸಿ ಕಲಂಗಳ 341, 141, 149, 283ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಸ್ಯಾಂಕಿ ಕೆರೆ ರಕ್ಷಣೆ ಹೋರಾಟಗಾರ ಬೆಂಬಲಕ್ಕೆ ನಿಂತಿದ್ದ ಈಗ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರು ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಪೊಲೀಸರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮದ ಎಚ್ಚರಿಕೆ ನೀಡಿದ್ದರು.
ADVERTISEMENT
ADVERTISEMENT