ಅನಿತಾ ಭಟ್ ಕ್ರಿಯೇಷನ್ಸ್ ಹಾಗೂ ರಾಜಲಕ್ಷ್ಮಿ ಸಿನಿ ಕ್ರಿಯೇಷನ್ಸ್ ನಿರ್ಮಾಣದ ‘ಸಮುದ್ರಂ’ ಚಿತ್ರದ ಟೈಟಲ್ ನ್ನು ರೋರಿಂಗ್ ಸ್ಟಾರ್ ಶ್ರೀ ಮುರುಳಿ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

ಸಮುದ್ರಂ ಚಿತ್ರವು ಕಡಲ ಕಿನಾರೆಯಲ್ಲಿನ ಭಾವನಾತ್ಮಕ ಕಥಾ ಹಂದರವನ್ನು ಹೊಂದಿರುವ ಚಿತ್ರವಾಗಿದೆ. ರಾಜಲಕ್ಷ್ಮಿ ಸಿನಿ ಕ್ರಿಯೇಷನ್ಸ್ ನಿರ್ಮಾಣ ಮಾಡಲಿರುವ ಈ ಚಿತ್ರಕ್ಕೆ ನಟಿ ಅನಿತಾ ಭಟ್ ಕ್ರಿಯೇಷನ್ಸ್, ಡಾಟ್ ಟಾಕೀಸ್ನ ಸಹಯೋಗವಿದೆ.
ಈ ಚಿತ್ರದಲ್ಲಿ ನಟಿ ಅನಿತಾ ಭಟ್ ಮತ್ತು ಶಿವಧ್ವಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಜ್ ಕಿಶೋರ್ ಹಾಗೂ ಸ್ವಾತಿ ಬಂಗೇರ ಜೋಡಿ ಕೂಡಾ ಮತ್ತೆರಡು ಪ್ರಧಾನ ಪಾತ್ರಗಳಲ್ಲಿ ನಟಿಸಲಿದ್ದಾರೆ. ರಾಘವ ಮಹರ್ಷಿ ಈ ಚಿತ್ರದ ನಿರ್ದೇಶನ ಮಾಡಲಿದ್ದು, ಆಕಾಶ್ ಪರ್ವ ಸಂಗೀತ ಸಂಯೋಜಿಸಿದ್ದಾರೆ. ರಿಷಿಕೇಶ್ , ಛಾಯಾಗ್ರಹಣ, ಸಂಕಲನ ಮತ್ತು ಚಿತ್ರಕಥೆ, ಸಂಭಾಷಣೆಯನ್ನು ಬರೆದಿದ್ದಾರೆ.