ಸಮಂತಾ – ನಾಗಚೈತನ್ಯ ವಿವಾಹ ವಿಚ್ಚೇದನ ವಿಚಾರ ಈಗಲೂ ತೆಲುಗು ಸಿನೆಮಾ ಇಂಡಸ್ಟ್ರೀಯಲ್ಲಿ ಹಾಟ್ ಟಾಪಿಕ್. ಈ ಜೋಡಿ ಬೇರ್ಪಟ್ಟಿದ್ದು ಏಕೆ ಎನ್ನುವ ಬಗ್ಗೆ ಈಗಲೂ ಯಾರಿಗೂ ಕ್ಲಾರಿಟಿ ಇಲ್ಲ. ಆದರೇ, ಡಿವೋರ್ಸ್ ಗೆ ಸಂಬಂಧಿಸಿದ ಸ್ಯಾಮ್ ಟಾರ್ಗೆಟ್ ಮಾಡಿ ಇತ್ತೀಚಿಗೆ ಕೆಲವರು ಟ್ರೋಲ್ ಮಾಡಿದ್ದರು. ಇದಕ್ಕೆ ಮುಟ್ಟಿ ನೋಡಿಕೊಳ್ಳುವ ರೀತಿಯಲ್ಲಿ ತಿರುಗೇಟು ನೀಡಿದ್ದ ಸಮಂತಾ, ಮತ್ತೊಮ್ಮೆ ಕಠಿಣ ಶಬ್ದಗಳಲ್ಲಿ ಟ್ವೀಟ್ ಮಾಡಿದ್ದು, ಇದು ಟಾಕ್ ಆಫ್ ದಿ ಇಂಡಸ್ಟ್ರಿ ಆಗಿದೆ.
‘ನನ್ನ ಮೌನವನ್ನು ಅಜ್ಞಾನ ಎಂದು ಭಾವಿಸಬೇಡಿ.. ನಾನು ಸೈಲೆಂಟ್ ಆಗಿ ಇದ್ದೀನಿ ಅಂದರೆ, ಏನನ್ನಾದರೂ ಅಂಗೇಕರಿಸುತ್ತೇನೆ ಎಂದು ಭಾವಿಸಬೇಡಿ. ನನ್ನ ದಯಾ ಗುಣವನ್ನು ನನ್ನ ಅಸಮರ್ಥತೆ ಎಂದು ಭಾವಿಸಬೇಡಿ. ದಯಾ ಗುಣ, ಒಳ್ಳೆಯತನಕ್ಕೂ ಒಂದು ಎಕ್ಸ್ ಪೈರಿ ಡೇಟ್ ಎನ್ನುವುದು ಇರುತ್ತದೆ‘ ಎಂದು ಸಮಂತಾ ಸ್ವೀಟ್ ವಾರ್ನಿಂಗ್ ನೀಡಿದ್ದಾರೆ.
ಆದರೇ ಯಾರನ್ನು ಉದ್ದೇಶಿಸಿ ಸಮಂತಾ ಈ ಟ್ವೀಟ್ ಮಾಡಿದ್ದಾರೆ ಎಂಬುದು ರಹಸ್ಯವಾಗಿ ಉಳಿದಿದೆ.