No Result
View All Result
ಭಾರೀ ಪಂಚ್ ಡೈಲಾಗ್ ಇಲ್ಲ. ನಟನಟಿಯರನ್ನೆಲ್ಲಾ ತೋರಿಸಲಿಲ್ಲ. ಆದರೆ. 1 ನಿಮಿಷ 45 ಸೆಕೆಂಡ್ಗಳ ಪವರ್ ಫುಲ್ ಆಕ್ಷನ್ ಟೀಸರ್ ಮೂಲಕ ಸಲಾರ್ ಮೇಲೆ ಎಕ್ಸ್ಪೆಕ್ಟೇಷನ್ಸ್ ಹೆಚ್ಚಿಸಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ಪ್ರಭಾಸ್ ನಾಯಕನಾಗಿ, ಪೃಥ್ವಿರಾಜ್ ಸುಕುಮಾರನ್, ಶೃತಿಹಾಸನ್, ಜಗಪತಿಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರವಿದು.
ಸಲಾರ್ ಎರಡು ಪಾರ್ಟ್ಗಳಲ್ಲಿ ಬರುತ್ತಾ ಎಂಬ ಪ್ರಶ್ನೆ ಕಳೆದ ಕೆಲ ದಿನಗಳಿಂದ ಕೇಳಿಬರುತ್ತಿತ್ತು. ಇದಕ್ಕೀಗ ಟೀಸರ್ ಮೂಲಕ ಉತ್ತರ ನೀಡಿದ ಹೊಂಬಾಳೆ ಫಿಲಂಸ್. ಸಲಾರ್ ಪಾರ್ಟ್-1: ಸೀಸ್ಫೈರ್ ಸಿನಿಮಾವನ್ನು ಸೆಪ್ಟೆಂಬರ್ 28ರಂದು ರಿಲೀಸ್ ಮಾಡುವುದಾಗಿ ಘೋಷಿಸಿದೆ. ಇದರೊಂದಿಗೆ ಪಾರ್ಟ್ 2 ಸಿನಿಮಾ ಕೂಡ ಇರಲಿದೆ ಎಂದು ಪ್ರಭಾಸ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಕೆಜಿಎಫ್ ಹಾದಿಯಲ್ಲೇ..
ಆಗ ವಾಯ್ಲೆನ್ಸ್..ವಾಯ್ಲೆನ್ಸ್..ವಾಯ್ಲೆನ್ಸ್.. ಎಂಬ ಸಿಂಗಲ್ ಡೈಲಾಗ್ನೊಂದಿಗೆ ಕೆಜಿಎಫ್2 ಟ್ರೈಲರ್ ರಿಲೀಸ್ ಮಾಡಿ ಪಾರ್ಟ್1 ಮೀರಿಸಿ ಸಿಕ್ವೆಲ್ ಇರುತ್ತೆ ಎಂಬ ಎಕ್ಸ್ಪೆಕ್ಟೇಷನ್ಸ್ ಜಾಸ್ತಿ ಮಾಡಿದ್ದರು ನಿರ್ದೇಶಕ ಪ್ರಶಾಂತ್ ನೀಲ್. ಮೂವಿ ರಿಲೀಸ್ ಆದ ನಂತರ ಹಣದ ಮಳೆಯನ್ನೇ ಸುರಿಸಿತ್ತು.
ಈಗ ಸಲಾರ್ ಗೆ ಕೂಡ ಒಂದು ಸಿಂಪಲ್ ಇಂಗ್ಲೀಷ್ ಡೈಲಾಗ್ ಮೂಲಕ ಸಿನಿಮಾ ಹೇಗಿರಲಿದೆ ಎಂಬುದನ್ನು ಪ್ರಶಾಂತ್ನೀಲ್ ತಿಳಿಸಿದ್ದಾರೆ.
ಸಿಂಹ, ಚಿರತೆ, ಟೈಗರ್, ಆನೆ ತುಂಬಾನೇ ಡೇಂಜರಸ್..ಆದರೆ, ಜುರಾಸಿಕ್ ಪಾರ್ಕ್ನಲ್ಲಿ ಅಲ್ಲ.. ಏಕೆ ಅಂದರೇ… ಎನ್ನುತ್ತಾ ಪ್ರಭಾಸ್ ಪಾತ್ರವನ್ನು ಎಲಿವೇಟ್ ಮಾಡುತ್ತಾ ಎಲ್ಲಾ ಭಾಷೆಗಳಿಗೂ ಸೇರಿಸಿ ರಿಲೀಸ್ ಮಾಡಿದ ಸಿಂಗಲ್ ಟೀಸರ್ ಸಿನಿಮಾ ಮೇಲೆ ಹೈಪ್ ಕ್ರಿಯೇಟ್ ಮಾಡಿದೆ.
ಕೆಜಿಎಫ್ ಸಿನಿಮಾವನ್ನು ಚಿನ್ನದ ಗಣಿ ನೇಪತ್ಯವನ್ನು ಹೊಂದಿತ್ತು. ಸಲಾರ್ ಸಿನಿಮಾ ಕಲ್ಲಿದ್ದಲು ಗಣಿಯ ನೇಪತ್ಯ ಹೊಂದಿರುತ್ತದೆ ಎಂಬುದು ಟಾಕ್. ಕೆಜಿಎಫ್ ಮಾದರಿಯಲ್ಲೇ ಈ ಸಿನಿಮಾವನ್ನು ಡಾರ್ಕ್ ಥೀಮ್ನಲ್ಲಿಯೇ ಶೂಟ್ ಮಾಡಿರುವುದು ವಿಶೇಷ.
ಸಲಾರ್ನಲ್ಲಿಯೂ ಹತ್ತಾರು ವಿಲನ್ಗಳಾ?
ಸಿಂಹ, ಚಿರತೆ, ಟೈಗರ್, ಆನೆ ತುಂಬಾನೇ ಡೇಂಜರಸ್..ಇದು ಸಲಾರ್ ಟೀಸರ್ನಲ್ಲಿ ಟೀನು ಆನಂದ್ ಹೇಳುವ ಡೈಲಾಗ್.. ಇದನ್ನು ಗಮನಿಸಿ ಹೇಳುವುದಾದರೇ ಸಿನಿಮಾದಲ್ಲಿ ವಿಲನ್ಗಳ ರೇಂಜ್ ಹೆಚ್ಚಿರುವ ಅವಕಾಶ ಇದೆ. ಕೆಜಿಎಫ್ನಲ್ಲಿ ಒಬ್ಬರನ್ನು ಮೀರಿಸುವಂತೆ ಇನ್ನೊಬ್ಬರು ಎನ್ನುವಂತೆ ಪ್ರತಿನಾಯಕರ ಪಾತ್ರಗಳನ್ನು ಪ್ರಶಾಂತ್ ನೀಲ್ ಎಲಿವೇಟ್ ಮಾಡಿದ್ದರು. ಹೆಚ್ಚುಕಡಿಮೆ ಪ್ರತಿಯೊಂದು ಪಾತ್ರವೂ ನೆಗೆಟೀವ್ ಶೇಡ್ನಲ್ಲಿಯೇ ಇತ್ತು. ಎರಡನೇ ಪಾರ್ಟ್ನಲ್ಲಂತೂ ಅಧೀರ ರೂಪದಲ್ಲಿ ಸಂಜಯ್ ದತ್ರನ್ನೇ ತಂದಿದ್ದರು. ಸಲಾರ್ನಲ್ಲಿಯೂ ಇಂಥಾದ್ದೇ ಪ್ಲಾನ್ ಮಾಡಿದ್ದಾರೆ ಎನ್ನುವುದು ಟಾಕ್.
ಈಗಾಗಳೆ ವರದರಾಜು ಮನ್ನಾರ್ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ರಾಜ ಮನ್ನಾರ್ ಪಾತ್ರದಲ್ಲಿ ಜಗಪತಿಬಾಬು ಕಾಣಿಸಿಕೊಳ್ಳುತ್ತಿರುವುದು ಕ್ಲಿಯರ್ ಆಗಿದೆ. ಶ್ರೀಯಾ ರೆಡ್ಡಿ ಪಾತ್ರ ಏನು ಎನ್ನುವುದು ಸಸ್ಪೆನ್ಸ್ ಆಗಿಯೇ ಉಳಿದಿದೆ. ಪಾರ್ಟ್-1ನಲ್ಲಿ ಇವರು ಕಾಣಿಸಿಕೊಳ್ಳುವುದು ಖಾಯಂ.. ಎರಡನೇ ಪಾರ್ಟ್ನಲ್ಲಿಯೂ ಇವರು ಇರುತ್ತಾರಾ ಇಲ್ಲವಾ? ಅಧೀರದಂತಹ ಬಲವಾದ ಕ್ಯಾರೆಕ್ಟರ್ ಇರುತ್ತಾ? ಎಂಬ ಕುತೂಹಲವನ್ನು ನಿರ್ದೇಶಕ ಪ್ರಶಾಂತ್ ನೀಲ್ ಉಳಿಸಿಕೊಂಡಿದ್ದಾರೆ. ಟೀನು ಆನಂದ್ ಡೈಲಾಗ್ನಲ್ಲಿರುವಂತೆ ಸಲಾರ್ನಲ್ಲಿರುವ ಆ ಸಿಂಹ, ಹುಲಿ, ಚಿರತೆ, ಆನೆ ಯಾರೆಂಬುದನ್ನು ತಿಳಿಯಲು ಇನ್ನೂ ಕೆಲ ದಿನ ವೇಯ್ಟ್ ಮಾಡಲೇಬೇಕು.
ನೀಲ್ ಸಿನಿಮಾಟಿಕ್ ಯೂನಿವರ್ಸ್..
ಸಲಾರ್ ಸಿನಿಮಾ ಪ್ರಕಟಿಸಿದ ದಿನದಿಂದ ಒಂದು ಆಸಕ್ತಿಕರ ಚರ್ಚೆಯೊಂದು ನಡೆಯುತ್ತಿದೆ. ಸಲಾರ್.. ಕೆಜಿಎಫ್ನ ಮುಂದುವರಿಕೆ ಭಾಗ ಆಗಿರುತ್ತದೆಯೇ? ಇಲ್ಲವೇ? ಪ್ರಶಾಂತ್ ನೀಲ್ ಸಿನಿಮಾಟಿಕ್ ಯೂನಿವರ್ಸ್ ಭಾಗವಾಗಿ ಬರುತ್ತಾ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಚದುರಂಗದಲ್ಲಿ ಎಲ್ಲರನ್ನು ದಾಟಿಕೊಂಡು ರಾಜನನ್ನು ಮುಗಿಸಿದರೇ ಆಟ ಮುಗಿದಂತೆ.. ಪಾನ್ಗಳನ್ನು ಮತ್ತೆ ಜೋಡೊಸದರೇ ಆಟ ಮತ್ತೆ ಶುರುವಾಗುತ್ತದೆ. ಅದೇನೀತಿ… ಅದೇ ನಿಯಮ.. ಹೊಸ ರಾಜ, ಇಲ್ಲಿ ತಲೆಗಳು ಶಾಶ್ವತ ಅಲ್ಲ... ಎಂದು ರಾಕಿಬಾಯ್ ಡೈಲಾಗ್ ಹೇಳ್ತಾನೆ. ಆಗ ರಾಜನ ಸ್ಥಾನದಲ್ಲಿ ರಾಕಿಭಾಯ್ ಇದ್ದರೇ ಈಗ ಪ್ರಭಾಸ್ ಇದ್ದಾರೆ.
ಮೇಲಾಗಿ ಕೆಜಿಎಫ್ ಮತ್ತು ಸಲಾರ್ಗೆ ಹಲವು ಸಾಮೀಪ್ಯತೆಗಳು ಇವೆ. ಡಾರ್ಕ್ ಥೀಮ್ನಲ್ಲಿಯೇ ಸಾಗುತ್ತವೆ. ಕೆಜಿಎಫ್2ನಲ್ಲಿ ಬರುವ ಒಂದು ಪಾತ್ರದ ಕೊರಳಿನಲ್ಲಿ ಇದ್ದ ಲಾಕೆಟ್ ಮಾದರಿಯಲ್ಲೇ ಪ್ರಭಾಸ್ ಕೊರಳಲ್ಲಿಯೂ ಇದೆ. ಇದು 2 ಭಾಗಗಳಲ್ಲಿ ಬರುತ್ತಿರುವುದು.
ಕೆಜಿಎಫ್ನಲ್ಲಿ ರಾಕಿಭಾಯ್ ಶಿಪ್ ಮುಳುಗುವ ಸಮಯ ಬೆಳಗಿನಜಾವ 5.12.. ಅದೇ ಸಮಯಕ್ಕೆ ಸಲಾರ್ ಟೀಸರ್ ಮಾಡಿದ್ದು..ಇದೆಲ್ಲವನ್ನು ನೋಡಿದಲ್ಲಿ ಇದು ಕೆಜಿಎಫ್ ಮುಂದುವರಿಕೆ ಭಾಗನಾ? ಅಥವಾ ನೀಲ್ ಸಿನಿಮಾಟಿಕ್ ಯೂನಿವರ್ಸಾ ಎಂಬ ಅನುಮಾನ ಬರುವುದು ಸಹಜ.
ಇದು ಪ್ರತಿಕಾರ ಕತೆನಾ?
ಸಲಾರ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಡಿಫ್ರೆಂಟ್ ಡಿಫ್ರೆಂಟ್ ಆಗಿ ಚರ್ಚೆಗಳು ನಡೆಯುತ್ತಿವೆ. ಇದನ್ನು ಪ್ರತೀಕಾರದ ಕತೆ ಎಂಬ ಮಾತು ಕೇಳಿಬರುತ್ತಿದೆ. ಕೊನೆ ಉಸುರಿನಲ್ಲಿದ್ದ ಗೆಳೆಯನಿಗೆ ನೀಡದ ವಚನವನ್ನು ಈಡೇರಿಸಲು ಕಥಾನಾಯಕ ಏನು ಮಾಡುತ್ತಾನೆ? ಏನೆಲ್ಲಾ ಸವಾಲುಗಳನ್ನು ಎದುರಿಸುತ್ತಾನೆ ಎಂಬ ಕಥೆಯನ್ನು ಆಧರಿಸಿ ಸಲಾರ್ ತೆಗೆಯಲಾಗಿದೆ ಎನ್ನುವುದು ಟಾಕ್. ಅಂದರೆ ಕೆಜಿಎಫ್2ನಲ್ಲಿ ಹುದುಗಿದ್ದ ಪಾತ್ರನೇ ಸಲಾರ್ ಕತೆಯೇ? ಮೊದಲು ಅಧೀರಾನನ್ನು ಎದುರಿಸಿದ್ದ ಫರ್ಮಾನ್ ಸ್ನೇಹಿತನೇ ಸಲಾರ್ ಆಗಿ ಕಾಣಿಸಲಿದ್ದಾನಾ? ಇಲ್ಲ, ಉಗ್ರಂ ನೇಪತ್ಯವನ್ನು ಬದಲಾಯಿಸಿ ಸಲಾರ್ ಮಾಡಲಾಗಿದೆಯಾ ಎಂಬ ಉತ್ತರವಿಲ್ಲದ ಪ್ರಶ್ನೆಗಳು ಮೂಡುತ್ತವೆ. ಅಂದ ಹಾಗೇ, ಜ್ಯೂನಿಯರ್ ಎನ್ಟಿಆರ್ ಜೊತೆ ಪ್ರಶಾಂತ್ ನೀಲ್ ಮುಂದಿನ ಚಿತ್ರವಿದೆ. ಇದು ಕೂಡ ಡಾರ್ಕ್ ಥೀಮ್ ಎನ್ನುವುದು ವಿಶೇಷ. ಅದು ಕೂಡ ಇದರ ಮುಂದುವರಿಕೆ ಭಾಗನಾ..? ಅಸಲಿಗೆ ಇದು ಈಗಲೇ ಮುಗಿಯುವಂತೆ ಕಾಣುತ್ತಿಲ್ಲ.
No Result
View All Result
error: Content is protected !!