ಐಪಿಎಲ್ ಫೈನಲ್ ಪಂದ್ಯದಲ್ಲಿ ಇವತ್ತು ಚೆನ್ನೈ ಸೂಪರ್ ಕಿಂಗ್ಸ್ ಅಕ್ಷರಶಃ ಕಾಡಿದ್ದು ತಮಿಳುನಾಡು ಮೂಲದ ಆಟಗಾರ ಸಾಯಿ ಸುದರ್ಶನ್.
ಐಪಿಎಲ್ ಸರಣಿಯಲ್ಲಿ ಗುಜರಾತ್ ಟೈಟಾನ್ಸ್ನ 21 ವರ್ಷದ ಆಟಗಾರ ಸಾಯಿ ಸುದರ್ಶನ್ ಇವತ್ತು ಅತೀ ಹೆಚ್ಚು ರನ್ ಗಳಿಸಿದ್ದಾರೆ. 47 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್ ಸಮೇತ 96 ರನ್ ಗಳಿಸಿ ಕೊನೆ ಓವರ್ನ ಮೂರನೇ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆದರು. ಇದು ಸಾಯಿ ಸುದರ್ಶನ್ ಅವರ 3ನೇ ಅರ್ಧ ಶತಕ ಕೂಡಾ ಹೌದು.
ಐತಿಹಾಸಿಕ ಪಂದ್ಯದಲ್ಲಿ ಸಾಯಿ ಅವರಿಗೆ ಶತಕ ಕೈ ತಪ್ಪಿದೆ. ಆದರೆ 204ರ ಸ್ಟ್ರೈಕ್ರೇಟ್ನಲ್ಲಿ ರನ್ ಹೊಳೆ ಹರಿಸಿ ಗುಜರಾತ್ ಟೈಟಾನ್ಸ್ 4 ವಿಕೆಟ್ಗೆ 214 ರನ್ಗಳಿಸಲು ಕಾರಣರಾದರು.
ಚೆನ್ನೈಗೆ ದುಬಾರಿಯಾದ ತುಷಾರ್ ದೇಶಪಾಂಡೆ:
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈಗೆ ದುಬಾರಿ ಆಗಿದ್ದು ಬೌಲರ್ ತುಷಾರ್ ದೇಶಪಾಂಡೆ. 4 ಓವರ್ನಲ್ಲಿ ಪ್ರತಿ ಓವರ್ಗೆ 14 ರನ್ಗಳಂತೆ 56 ರನ್ ನೀಡಿ ದುಬಾರಿಯಾದರು. 4 ಓವರ್ನಲ್ಲಿ ಗುಜರಾತ್ ತಂಡ 7 ಬೌಂಡರಿ ಮತ್ತು 3 ಸಿಕ್ಸರ್ ಚಚ್ಚಿತು.
ADVERTISEMENT
ADVERTISEMENT