ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಲಿಕ ಕುಸಿತ ಕಂಡಿದೆ. ಇದೇ ಮೊದಲ ಬಾರಿ ಡಾಲರ್ ಎದುರು ಭಾರತದ ರೂಪಾಯಿ 79.40 ರೂ.ಗಳಿಗೆ ಇಳಿದಿದೆ.
ತೈಲ ಮಾರುಕಟ್ಟೆಯಲ್ಲಿನ ಏರುಪೇರು ಮತ್ತು ನಿರಂತರ ಹಣದುಬ್ಬರ ಪರಿಣಾಮ ಭಾರತೀಯ ಷೇರುಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದೆ.
ಶುಕ್ರವಾರ 79.25 ರೂ.ಗಳಿಗೆ ಕುಸಿದಿತ್ತು. ಇಂದು ಮಾರುಕಟ್ಟರ ಆರಂಭದ ಹೊತ್ತಿಗೆ ಮತ್ತೆ 15 ಪೈಸೆ ಕುಸಿದು, ಸಾರ್ವಕಾಲಿಕೆ ಕುಸಿತ ಕಂಡಿದೆ.
ಕಳೆದ ವಾರ ಡಾಲರ್ ಎದುರು ಸಾರ್ವಕಾಳಿಕ ಕುಸಿತ ಕಂಡಿದ್ದ ರೂಪಾಯಿ 79.37 ರೂ.ಗಳಿಗೆ ಕುಸಿದಿತ್ತು. ಇಂದು ಮತ್ತಷ್ಟು ಸಾರ್ವಕಾಲಿಕ ಕುಸಿತ ಕಂಡ 79.40 ರೂ.ಗಳಿಗೆ ತಲುಪಿದೆ.
ಭಾರತದ ಕರೆನ್ಸಿ ಶೀಘ್ರವೇ ಡಾಲರ್ ಎದುರು 80 ರೂ.ಗಳಿಗೆ ಸಾರ್ವಕಾಲಿಕ ಕುಸಿತ ಕಾಣಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದಾರೆ.