ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಸಚಿವರ ಚೇಲಾಗಳು ಗೂಂಡಾಗಿರಿ ನಡೆಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಆರ್ಆರ್ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ನ ಕುಸುಮ ಹನುಮಂತರಾಯಪ್ಪ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ನಂದಿನಿ ಲೇಔಟ್ ಪೊಲೀಸರಿಗೆ ನೀಡಿರುವ ದೂರಿನ ಪ್ರತಿ ಮತ್ತು ಘಟನೆಯ ವೀಡಿಯೋವನ್ನು ಕುಸುಮ ಹನುಮಂತರಾಯಪ್ಪ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇವತ್ತು ಬೆಳಗ್ಗೆ 11.30ಕ್ಕೆ ಪಕ್ಷದ ಕಾರ್ಯಕರ್ತರೊಂದಿಗೆ ಲಕ್ಷ್ಮೀದೇವಿ ನಗರ ವಾರ್ಡ್ನ ತ್ಯಾಗಿ ನಗರ ಕ್ವಾಟ್ರರ್ಸ್ ನಿವಾಸಿಗಳಿಗೆ ಮಳೆ ಹಾನಿ ಹಿನ್ನೆಲೆಯಲ್ಲಿ ಟಾರ್ಪಲ್ ವಿತರಿಸುತ್ತಿದ್ದೆವು.
ಈ ವೇಳೆ ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕರ್ ಮತ್ತು ಆತನ ಬೆಂಬಲಿಗರು ಹಲ್ಲೆ ನಡೆಸಿದರು ಮತ್ತು ಬೆದರಿಕೆ ಹಾಕಿದರು. ನನ್ನ ಮೈ ಕೈ ಹಿಡಿದು ಎಳೆದಾಡಿ ಹಲ್ಲೆ ಮಾಡಿದರು.
ನೀನು ಯಾವ ಪೊಲೀಸ್ ಬಳಿ ಹೋದರೂ ಏನೂ ಮಾಡೋದಿಕ್ಕೆ ಆಗೋದಿಲ್ಲ, ನಾವೇ ನಿನ್ನ ಮೇಲೆ ಕೇಸ್ ಹಾಕಿಸ್ತೀವಿ ಎಂದು ಬೆದರಿಕೆ ಹಾಕಿದರು
ಎಂದು ಕುಸುಮ ಹನುಮಂತರಾಯಪ್ಪ ಅವರು ದೂರು ನೀಡಿದ್ದಾರೆ.