ಬೆಂಗಳೂರಿನ (Bengaluru) ಮಾಲ್ ಆಫ್ ಏಷಿಯಾಕ್ಕೆ (Mall of Asia Bengaluru) ನುಗ್ಗಿ ದಾಂಧಲೆ ಎಸಗಿದ ಸಂಬಂಧ ರೌಡಿ ಶೀಟರ್ ಪುನಿತ್ ಕೆರೆಹಳ್ಳಿ (Puneeth Kerehalli) ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ರೌಡಿ ಶೀಟರ್ ಪುನಿತ್ ಕೆರೆಹಳ್ಳಿ ಮೊದಲನೇ ಆರೋಪಿಯಾಗಿದ್ದಾನೆ.
ಈತನ ವಿರುದ್ಧ ಐಪಿಸಿ ಕಲಂಗಳಾದ 505(1),(ಬಿ),506, 341,143,298,505(2) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಪುನೀತ್ ಕೆರೆಹಳ್ಳಿ ಮತ್ತು ಉಳಿದ 5 ಮಂದಿ ದುಷ್ಕರ್ಮಿಗಳು ಶನಿವಾರ ಮಧ್ಯಾಹ್ನ 1.20ರ ವೇಳೆ್ಗೆ ಮಾಲ್ ಆಫ್ ಏಷಿಯಾಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿದ್ದರು. ಡಿಸೆಂಬರ್ 25 ಮತ್ತು ಡಿಸೆಂಬರ್ 31ರಂದು ಮಾಲ್ ಎದುರುಗಡೆ ಗಲಾಟೆ ಮಾಡುವ ಬೆದರಿಕೆ ಹಾಕಿದ್ದಾರೆ. ಪುನೀತ್ ಕೆರೆಹಳ್ಳಿ ಮತ್ತು ಆತನೊಂದಿಗಿದ್ದ ದುಷ್ಕರ್ಮಿಗಳ ಗುಂಪು ಜೈಶ್ರೀರಾಮ್ ಘೋಷಣೆ ಕೂಗುತ್ತಾ ಮಾಲ್ನಲ್ಲಿದ್ದ ಗ್ರಾಹಕರಿಗೆ ಮತ್ತು ಸಿಬ್ಬಂದಿಗೆ ಹೊಡೆಯುವ ಬೆದರಿಕೆ ಹಾಕಿದ್ದಾರೆ ಎಂದು ಕೊಡಿಗೆಹಳ್ಳಿ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ಆರೋಪಿಸಲಾಗಿದೆ.
ADVERTISEMENT
ADVERTISEMENT